hubbali

ಮಹಾದಾಯಿ ಯೋಜನೆ ವಿಳಂಬವಾದ್ರೆ ನರಗುಂದದಿಂದ ಬೆಂಗಳೂರಿಗೆ ಪಾದಯಾತ್ರೆ: ವೀರೇಶ ಸೊಬರದಮಠ ಎಚ್ಚರಿಕೆ

Share

ಉ.ಕ ಅಭಿವೃದ್ಧಿ ಹಾಗೂ ಮಹಾದಾಯಿ ಯೋಜನೆ ಈ ತಿಂಗಳು ಒಳಗಾಗಿ ಪ್ರಾರಂಭ ಮಾಡಬೇಕು. ವಿಳಂಬವಾದಲ್ಲಿ ಮಾರ್ಚ್ ತಿಂಗಳಿನಲ್ಲಿ ನರಗುಂದ ವೇದಿಕೆ ವತಿಯಿಂದ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಳ್ಳುವುದಾಗಿ ರೈತ ಸೇನಾ ಕರ್ನಾಟಕದ ವಿರೇಶ ಸೊಬರದಮಠ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿಗೆ ಸಂಬಂದಿಸಿದಂತೆ ೩ವರ್ಷ ಕಳೆದಿದ್ದು,, ೧೬೦೦ ಕೋಟಿಗಿಂತಲೂ ಹೆಚ್ಚಿನ ಅನುದಾನ ಕಾಯ್ದರಿಸಿದರೂ ಸಹ ಇನ್ನೂ ಮಹಾದಾಯಿ ಯೋಜನೆ ಇನ್ನೂ ಪ್ರಾರಂಭ ಮಾಡದಿರುವುದು ಖಂಡನೀಯವಾಗಿದೆ ಎಂದರು.

ರೈತರ ಸಾಲಗಳ ಬಗ್ಗೆ ಹಾಗೂ ಬ್ಯಾಂಕ್ ಅಧಿಕಾರಿಗಳು ಮಾಡುವ ತಪ್ಪುಗಳು ಮಾಡುವ ತಪ್ಪುಗಳ ಕುರಿತು ಜಾಗೃತಿ ಮೂಡಿಸಬೇಕಿದೆ..
ನೀರಾವರಿ ಯೋಜನೆಗೆ ಅನುಷ್ಠಾನಕ್ಕೆ ಆದ್ಯತೆ ನೀಡಬೇಕಿದ್ದು, ಉತ್ತರ ಕರ್ನಾಟಕದವರೇ ಸಿಎಂ ಆಗಿದ್ದರೂ ಕೂಡಾ ಉ.ಕ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ‌ ಎಂದರು.

ನೀರಾವರಿ ಯೋಜನೆ ಅನುಷ್ಠಾನದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿದರು.
ರೈತರಿಗೆ ೧೦ ಸಾವಿರ ಕೋಟಿ ರೂ.ಗಳನ್ನು ಶಾಶ್ವತ ಖರೀದಿ‌ ಕೇಂದ್ರಕ್ಕೆ ಕಾಯ್ದಿರಸಬೇಕುಬೇಕು ಎಂದರು.
ಕೃಷಿಗಾಗಿ ಬಜೆಟನಲ್ಲಿ ೧೦, ೦೦೦ ಕೋಟಿ ಮೀಸಲಿಡದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ
ಬಸವರಾಜ ಗೂಡಿ, ಚಿದಾನಂದ ಹುಬ್ಬಳ್ಳಿ, ಗುರು ರಾಯನಗೌಡ್ರ, ಮಲ್ಲಣ್ಣ ಆಲೇಕರ ಉಪಸ್ಥಿತರಿದ್ದರು.

Tags:

error: Content is protected !!