ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ದೂರು ನೀಡಿದೆ.
ಶಾಂತಿ ಕದಡುವ ಸುಳ್ಳು ಸುದ್ದಿ ಪೆÇೀಸ್ಟ್ ಮಾಡಿದ ಆರೋಪ ಮಾಡಿ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಪೆÇಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್‍ಗೆ ದೂರು ಕೊಡಲಾಗಿದೆ. ರಾಜ್ಯ ಬಿಜೆಪಿ ಕೋಶಾಧ್ಯಕ್ಷ ಸುಬ್ಬನರಸಿಂಹ ನೇತೃತ್ವದಲ್ಲಿ ಪ್ರವೀಣ್ ಸೂದ್‍ಗೆ ದೂರು ನೀಡಲಾಗಿದೆ.