Kagawad

ಉಗಾರಖುರ್ದನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲ ಚಾಲನೆ

Share

ಉಗಾರ್ ಖುರ್ದ್ ಪಟ್ಟಣದ ಸವಾರ್‍ಂಗೀಣ ಅಭಿವೃದ್ಧಿಗಾಗಿ ನಾನು ಕಟಿಬದ್ಧನಾಗಿದ್ದೇನೆ. ಈಗಾಗಲೇ 1,9ಕೋಟಿರೂ ವೆಚ್ಚದ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದೇನೆ. ಎಲ್ಲ ಕಾಮಗಾರಿಗಳು ಗುಣಮಟ್ಟದ ಆಗಬೇಕು ಎಂದು ಅಧಿಕಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲರು ಎಚ್ಚರಿಕೆ ನೀಡಿದರು.

ಕಾಗವಾಡ ತಾಲೂಕಿನ ಉಗಾರ್ ಖುರ್ದ್ ಪಟ್ಟಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ 2020-21ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಮಂಜೂರುಗೊಂಡ 1.9 ಕೋಟಿ ವೆಚ್ಚದ ಕಾಮಗಾರಿಗಳ ಆದ ಸ್ಥಳೀಯ ಮರಾಠ ಸಮಾಜ, ಲಿಂಗಾಯತ ಸಮಾಜದ, ಸಮುದಾಯ ಭವನಗಳಿಗೆ ತಡೆಗೊಡೆ ನಿರ್ಮಿಸುವುದು, ಚರಂಡಿ ನಿರ್ಮಿಸುವುದು, ರಸ್ತೆ ಅಭಿವೃದ್ಧಿಗೊಳಿಸುವುದು, ಹಾಯ್‍ಮ್ಯಾಕ್ಸ್ ಲೈಟ್ ವ್ಯವಸ್ಥೆ, ಹೈಟೆಕ್ ಶೌಚಾಲಯಕಟ್ಟಿಸುವುದು, ಸಿಸಿ ರಸ್ತೆನಿರ್ಮಿಸುವುದು. ಹೀಗೆ ಬೇರೆ ಬೇರೆ ಕಾಮಗಾರಿಗಳಿಗೆ ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ವೇಳೆ ಶಾಸಕ ಶ್ರೀಮಂತ ಪಾಟೀಲ ಮಾತನಾಡಿಉಗಾರ್ ಪಟ್ಟಣದ ಸರ್ವಾಂಗೀಣಅಭಿವೃದ್ಧಿಗಾಗಿ ನಾನು ಪ್ರಯತ್ನಿಸುತ್ತಿದ್ದೇನೆ. ಉಗಾರ್ ಮತ್ತುಐನಾಪುರ್, ಈ ಎರಡು ಪಟ್ಟಣಗಳಲ್ಲಿ ಹರಿದು ಬರುವಚರಂಡಿ ನೀರುಒಂದು ಸ್ಥಳದಲ್ಲಿ ಸಂಗ್ರಹಿಸಿ ಅದನ್ನು ಶುದ್ಧೀಕರಣಗೊಳಿಸಿ, ಅದನ್ನುರೈತರಿಗೆ ಬೇಸಾಯಕ್ಕೆ ಬಳಸಲು ನೀರು ಪೂರೈಸುವಯೋಜನೆಕೈಗೊಂಡಿದ್ದುಎರಡು ಪಟ್ಟಣಗಳಿಗೆ ತಲಾ 13 ಕೋಟಿರೂಪಾಯಿ ಮಂಜೂರು ಗೊಳಿಸಿದ್ದೇನೆ. ಈ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡುತ್ತೇನೆಎಂದರು.

ಪುರಸಭೆಅಭಿಯಂತರಾದ ಸಿದ್ದರಾಮ ಚೌಗುಲೆ, ಮಾತನಾಡಿಉಗಾರ ಪುರಸಭೆಯಲ್ಲಿ 2020-21 ನೇ ಸಾಲಿನ 15ನೇ ಹಣಕಾಸಿನ ಯೋಜನೆಅಡಿಯಲ್ಲಿ 1.9 ಕೋಟಿರೂ.ವೆಚದಲ್ಲಿಕಾಮಗಾರಿಕೈಗೊಂಡಿದ್ದು, ಗುಣಮಟದ ಕಾಮಗಾರಿಗಳು ಮಾಡಲುಎಲ್ಲಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆಎಂದರು.

ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯ ಅಧಿಕಾರಿಗಳಾದ ಸುನೀಲ್ ಬಬಲಾದಿ, ಕಲ್ಲಪ್ಪಗಾವಡೆ, ಪುರಸಭೆ ನೂತನ ಸದಸ್ಯರಾದ ಪೆÇ್ರಫೈಲ್‍ತೋರೂಶೆ, ವಿನಾಯಕಕಾಮೇರಿ, ರಾಜೇಂದ್ರ ಪಾಟೀಲ್, ರವಿ ರಾಜಮಾನೆ, ಪ್ರಕಾಶ್‍ತೋರೂಶೆ, ಸುಭಾμïಕುರಾಡೆ, ಹೀನಾ ಹೊಸಮನಿ, ವಿನಾಯಕಕಾಮೇರಿ, ಸದಾಶೀವ ಸಿಂಗೆ, ಗುತ್ತಿಗೆದಾರರಾದವಿಶಾಲ್ ಪಾಂಡರೆ, ಕಲಂದರ್‍ಅತ್ತಾರ್, ಮಹಮ್ಮದಹುಸೇನ್‍ಜಕಾತಿ, ಸಚಿನ್ ಸಾಳುಂಕೆ ಸೇರಿದಂತೆಮತ್ತಿತ್ತರು ಉಪಸ್ಥಿತರಿದ್ದರು.

 

Tags:

error: Content is protected !!