ತಂದೆಯೊಂದಿಗೆ ಶಾಲೆಗೆ ಹೋಗುವ ವೇಳೆ ಮರದ ಕೊಂಬೆ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸಾವನ್ನಪ್ಪದ್ದಾಳೆ.
9ವರ್ಷದ ಪ್ರಿಷಾ ಚಿಕಿತ್ಸೆ ಫಲಿಸದೆ ಮೃತಪಟ್ಟಿ ಬಾಲಕಿಯಾಗಿದ್ದಾಳೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ 702 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಪ್ರಿμÁ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ. ಮಗಳನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಮಾರ್ಚ್ 11ರಂದು ಪ್ರಿμÁ ತಂದೆಯೊಂದಿಗೆ ಬೈಕ್ ಮೇಲೆ ಶಾಲೆಗೆ ಹೊರಟಿದ್ದಳು. ಈ ವೇಳೆ ರಾಮಮೂರ್ತಿ ನಗರದ ಕೌದೇನಹಳ್ಳಿ ಬಳಿ ರವೊಂದರಿಂದ ಒಣಗಿದ ರೆಂಬೆ ಬಿದ್ದು, ಬಾಲಕಿ ಪ್ರಿμÁ ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಿಯ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ಆಕೆಯನ್ನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗೆ 702 ದಿನಗಳಿಂದಲೂ ಆಸ್ಪತ್ರೆಯಲ್ಲೇ ಟ್ರೀಟ್‍ಮೆಂಟ್ ಪಡೆಯುತ್ತಿದ್ದ ಪ್ರಿಶಾ, ಇವತ್ತು ಚಿಕಿತ್ಸೆ ಫಲಿಸದೇ ಅಸುನೀಗಿದ್ದಾಳೆ. ಮಗಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.

ಸ್ಕೂಲ್‍ನಲ್ಲಿ ಪ್ರೀಷಾ ಯಾವಾಗಲೂ ಮುಂದೆ, ಹಾಡು ಡ್ಯಾನ್ಸ್ ಅಂತಾ ಯಾವಾಗಲೂ ಲವಲವಿಕೆಯಿಂದ ಓಡಾಡಿಕೊಂಡಿದ್ದಳು. ತಂದೆ-ತಾಯಿಗಳಿಗೆ ಒಬ್ಬಳೇ ಮಗಳಾಗಿದ್ದರಿಂದ ಪ್ರೀತಿಪಾತ್ರಳಾಗಿದ್ದಳು. ಆದರೆ ವಿಧಿಯಾಟ ವಿಪರೀತವಾಗಿತ್ತು. ಇನ್ನು ಈ ಅವಘಡದ ಬಗ್ಗೆ ಗೊತ್ತಾಗ್ತಿದ್ದಂತೆ ನಟ ಸುದೀಪ್ ಕೂಡಾ ವಿಡಿಯೋ ಕಾಲ್ ಮಾಡಿ ಪುಟಾಣಿಯ ಆರೋಗ್ಯ ವಿಚಾರಿಸಿದ್ರು. ಪ್ರಿಶಾಗೆ ಧೈರ್ಯ ತುಂಬಿದ್ರು. ಅμÉ್ಟೀ ಅಲ್ಲ ಒಬ್ಬ ವೈದ್ಯರನ್ನೂ ಪ್ರಿಶಾಳ ಚಿಕಿತ್ಸೆಗೆ ನೇಮಕ ಮಾಡಿದ್ದರು. ಆದರೂ ಪ್ರಿಶಾ ಬದುಕುಳಿಯಲಿಲ್ಲ. ಬರೋಬ್ಬರಿ 700 ದಿನ ಚಿಕಿತ್ಸೆ ನೀಡಿರೋದ್ರಿಂದ ಅಂದಾಜು 80 ಲಕ್ಷ ರೂಪಾಯಿ ಬಿಲ್ ಆಗಿದೆ. ಶುಲ್ಕ ಭರಿಸುವ ಭರವಸೆ ನೀಡಿದ್ದ ಪಾಲಿಕೆ ಇದನ್ನ ಭರಿಸುವ ಸಾಧ್ಯತೆ ಇದೆ. ಒಣಗಿ ಹೋಗಿದ್ದ ಮರದ ರೆಂಬೆಗೆ ಬಾಲಕಿ ಬಲಿಯಾಗಿದ್ದು ನಿಜಕ್ಕೂ ದುರಂತ. ಪಾಲಿಕೆ ಇನ್ನಾದರೂ ಎಚ್ಚೆತ್ತುಕೊಂಡು ಇಂಥ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ.