ಬೆಳಗಾವಿಯ ಸರಸ್ವತಿ ನಗರದ ಪೈಪ್ ಲೈನ್ ರಸ್ತೆಯಲ್ಲಿ ಸರಕಾರಿ ಜಾಗೆಯನ್ನು ಅತಿಕ್ರಮವಾಗಿ ಕಬಳಿಸಿ ನಿರ್ಮಿಸಿಕೊಂಡಿದ್ದ ಅಂಗಡಿ ಮುಂಗಟ್ಟುಗಳನ್ನು ಗಣೇಶಪುರ ಗ್ರಾಮ ಪಂಚಾಯತ ಅಧಿಕಾರಿಗಳು ತೆರವುಗೊಳಿಸಿದರು.

ಬೆಳಗಾವಿಯಿಂದ ಗಣೇಶಪುರಕ್ಕೆ ತೆರಳುವ ಮಾರ್ಗದಲ್ಲಿರುವ ಸರಸ್ವತಿ ನಗರದ ಪೈಪ್ ಲೈನ್ ರಸ್ತೆಯಲ್ಲಿ, ಸರಕಾರಿ ಜಾಗೆಯನ್ನು ಅತಿಕ್ರಮಿಸಿ ಕೆಲ ಸಾರ್ವಜನಿಕರು ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ವ್ಯವಹಾರ ನಡೆಸುತ್ತಿದ್ದರು. ಇನ್ನು ಬೆನಕನಹಳ್ಳಿ ಗ್ರಾಮ ಪಂಚಾಯತ ಅಧಿಕಾರಿಗಳು ಸರಕಾರಿ ಜಾಗ ಅತಿಕ್ರಮಿಸಿದ್ದೀರಿ. ನಿಮ್ಮ ಅಂಗಡಿಗಳನ್ನು ತೆರವುಗೊಳಿ ಎಂದು ಕೆಲ ದಿನಗಳ ಹಿಂದೆಯೇ ತಾಕೀತು ಮಾಡಿದ್ದರು. ಆದರೂ ಕೆಲ ಅಂಗಡಿಕಾರರು ಕ್ಯಾರೆ ಎಂದಿರಲಿಲ್ಲ. ಈಗ ಈ ಮಾರ್ಗ 60 ಅಡಿ ವಿಶಾಲತೆ ಹೊಂದಿದ್ದು ಶಾಸಕರ ಅಭಿವೃದ್ಧಿ ಅನುದಾನದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾಹಾಗಿ ಇಂದು ಖುದ್ದು ಬೆನಕನಹಳ್ಳಿ ಗ್ರಾಮ ಪಂಚಾಯತ ಅಧಿಕಾರಿಗಳು ಜೆಸಿಬಿ ವಾಹನಗಳೊಂದಿಗೆ ಬಂದು, ಅತಿಕ್ರಮಣ ಮಾಡಿ ನಿರ್ಮಿಸಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಅಂಜನಾ ನಾಯಕ್, ಪೈಪ್ ಲೈನ್ ರಸ್ತೆಯಲ್ಲಿ ಸಾರ್ವಜನಿಕರು ಕೆಲವರು ಸರಕಾರಿ ಜಾಗೆಯನ್ನು ಅತಿಕ್ರಮಿಸಿ ಅಂಗಡಿಗಳನ್ನು ನಿರ್ಮಾಣ ಮಾಡಿದ್ದರು. ಅವರಿಗೆ ಹಲವಾರು ಬಾರಿ ತಿಳಿಸಿದರೂ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಪಂಚಾಯತ ಅಧಿಕಾರಿಗಳೊಂದಿಗೆ ಸರಕಾರಿ ಜಾಗೆ ಅತಿಕ್ರಮ ಮಾಡಿದ್ದನ್ನು ತೆರವುಗೊಳಿಸುತ್ತಿದ್ದೇವೆ. ಈ ತೆರವು ಕಾಮಗಾರಿ ಗಣೇಶಪುರ ಮುಖ್ಯ ರಸ್ತೆಯಿಂದ ಸರಸ್ವತಿನಗರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಒಟ್ಟಿನಲ್ಲಿ ಸರ್ಕಾರಿ ಜಾಗೆಯಲ್ಲಿ ಇಷ್ಟು ದಿನ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಾಪಾರಿಗಳಿಗೆ ಇದೀಗ ಪಂಚಾಯತಿಯವರು ಬಿಗ್ ಶಾಕ್ ಕೊಟ್ಟಿದ್ದು. ಮುಂದೆ ನಮ್ಮ ಜೀವನ ಹೇಗೆ ಎನ್ನುತ್ತಿದ್ದಾರೆ.