Belagavi

ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ

Share

ಬೆಂಗಳೂರು ಮಹಾನಗರದ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ನಗದು 10 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನಿಸಲಾಗುವುದು.

ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಟಾನದ ವತಿಯಿಂದ ಇದೇ ಫೆ.20 ರಂದು ಬೆಂಗಳೂರು ಮಹಾನಗರದ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಿ ನಗದು 10 ಸಾವಿರ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡಲಿದ್ದಾರೆ. ಕಳೆದ ವರ್ಷ ಶ್ರೀಮಠದಿಂದ ಸಂಸ್ಕೃತ ವಾರ್ತೆ ಓದುವರಲ್ಲಿ ಅಗ್ರಗಣ್ಯರಾದ ಫಲದೇವಾನಂದ ಸಾಗರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ ಬೆಂಗಳೂರು ಮಹಾನಗರ ಪಾಲಿಕೆಯು ಸಂಸ್ಕøತದ ಶಿಕ್ಷಕರು ಸೇರಿ ಕಟ್ಟಿರುವ ಒಂದು ಸಂಸ್ಥೆ ಕಾರ್ಯಕ್ರಮಕ್ಕೆ ಭಾಗಿಯಾಗಿ ಯಾರು ಸಂಸ್ಕøತದಲ್ಲಿ ವಿದ್ವಾಂಸರಿರುತ್ತಾರೆ ಅಂತವರಿಗೆ ಸಂಸ್ಕøತ ಸೇವಾ ಅಭಿವೃದ್ದಿ ಪ್ರಶಸ್ತಿಯನ್ನು ಕಳೆದ ವರ್ಷದಿಂದ ನೀಡಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಕೆ.ಇ.ದೇವನಾಥನ್, ಮಾಗಡಿ ಶಾಸಕ ಎ.ಮಂಜುನಾಥ, ಯಲಹಂಕ ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್.ವಿಶ್ವನಾಥ, ಶಿಂಧಿ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಮದನ್ ದೌಲತ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

Tags:

error: Content is protected !!