State

೫೧ ಸಾವಿರ ದಾಟಿದ ಚಿನ್ನದ ಬೆಲೆ…!!! ಬಡವರಿಗೆ ಗಗನ ಕುಸುಮವಾದ ಬಂಗಾರ

Share

ಅನ್‌ಲಾಕ್ ಆಗುತ್ತಿದ್ದಂತೆ ಮದುವೆ ಸಮಾರಂಭಗಳು ಅದ್ಧೂರಿಯಾಗಿ ನಡೆಯುತ್ತಿವೆ. ಆದರೇ ಕೊರೋನಾ ಲಾಕ್‌ಡೌನ್‌ನಿಂದ ಒಂದೆಡೆ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಇನ್ನೊಂದೆಡೆ ಚಿನ್ನದ ಬೆಲೆ ಗಗನಕ್ಕೇರಿದೆ.
ಇಂದು ೧೦ ಗ್ರಾಂ ಚಿನ್ನದ ಬೆಲೆ ೫೧ ಸಾವಿರ ಚಿಲ್ಲರೆಯಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ೨೨ ಕ್ಯಾರೇಟ್ ಚಿನ್ನದ ಬೆಲೆ ೪೬,೮೦೦/-
೨೨ ಕ್ಯಾರೆಟ್‌ನ ೧೦೦ ಗ್ರಾಂ ಚಿನ್ನದ ಬೆಲೆ ೪,೬೮,೦೦೦/-
೨೪ ಕ್ಯಾರೆಟ್ ೧೦೦ ಗ್ರಾಂ ಚಿನ್ನದ ಬೆಲೆ ೫,೧೦,೫೦೦/- ಇಷ್ಟಾಗಿದೆ. ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಲೂ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಿಗಂತೂ ಚಿನ್ನ ಗಗನ ಕುಸುಮವಾಗುತ್ತಿದೆ.

Tags:

error: Content is protected !!