ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಹುಂಡ್ರೈ ಕಂಪನಿಗೆ ಗ್ರಾಹಕನೊರ್ವ ಸೆಡ್ಡು ಹೊಡೆದಿದ್ದಾರೆ. ದೇಶ ವಿರೋಧಿ ಟ್ವಿಟ್ ಮಾಡಿದ ಹುಂಡೈ ಕಂಪನಿ ವಿರುದ್ಧ ತನ್ನದೆ ಶೈಲಿಯಲ್ಲಿ ಸೇಡು ತೀರಿಸಿಕೊಳ್ತಿದ್ದಾರೆ ಈ ದೇಶಪ್ರೇಮಿ. “ಹುಂಡ್ರೈ ಕಂಪನಿ ಕಾರು ಓಡಿಸೋಕೆ ನನಗೆ ನಾಚಿಕೆ ಆಗ್ತಿದೆ” ಎಂದು ಕಾರ್ಗೆ ಬೋರ್ಡ್ ಹಾಕಿದ್ದು, ಹುಂಡೈ ಕಾರಿನ ಲೋಗೋಗಳಿಗು ಕಪ್ಪು ಪಟ್ಟಿ ಅಂಟಿಸಿ ಆಕ್ರೋಶ ಹೊರಹಾಕಿದ್ದಾರೆ.

ವಿಜಯಪುರ ನಗರದ ನಿವಾಸಿ ಸಂತೋಷ ಚೌಧರಿ ಹುಂಡೈ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು. ತನ್ನ ಹುಂಡೈ i20 ಕಾರಿನ ಮುಂದೆ ಹಾಗೂ ಹಿಂದೆ ದೊಡ್ಡ ಸ್ಟಿಕ್ಕರ್ ಬೋರ್ಡ್ ಹಾಕಿ ಈ ಕಾರ್ ಓಡಿಸಲು ನನಗೆ ನಾಚಿಕೆ ಆಗ್ತಿದೆ… ಇದೊಂದು ದೇಶ ವಿರೋಧಿ ಕಂಪನಿ.. #ಜೈಹಿಂದ್ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ. “I AM ASHAMED TO DRIVE THIS CAR WHICH IS AN ANTI-NATIONAL COMPANY”
#JAI HIND ಎಂದು ಕಾರ್ ಮೇಲೆ ದೊಡ್ಡ ಸ್ಟಿಕ್ಕರ್ ಅಂಟಿಸಿ ಹುಂಡೈ ಕಾರು ಕಂಪನಿ ನಾಚಿಕೆ ಪಡುವ ರೀತಿಯಲ್ಲಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು.

ತನ್ನ ಹುಂಡೈ ಕಾರ್ ವಾಪಾಸ್ ಕಂಪನಿಗೆ ಪುಕ್ಸಟ್ಟೆಯಾಗಿ ಕೊಟ್ಟು ಬಿಡ್ತೀನಿ ಎಂದಿದ್ದಾರೆ. ಹುಂಡೈ ಕಂಪನಿಗೆ ನಾಚಿಕೆಯಾಗಲಿ ಎಂದು ಇದೆ ರೀತಿ ಕಾರನ್ನ ತೆಗೆದುಕೊಂಡು ಓಡಾಡ್ತಿದ್ದಾರೆ. ಈ ಮೂಲಕ ದೇಶವಿರೋಧಿ ಟ್ವಿಟ್ ಮಾಡಿದ ಕಂಪನಿಗೆ ಬುದ್ಧಿ ಕಲಿಸುತ್ತಿದ್ದಾರೆ..