Dharwad

ಹಿಜಾಬ್ ವಿವಾದ: ಧಾರವಾಡದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ, ಹೈಕೋರ್ಟ್‌ ಆದೇಶ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಅಗ್ರಹ

Share

ಹಿಜಾಬ್ ವಿವಾದದಲ್ಲಿ ಹೈ ಕೋರ್ಟ್ ಆದೇಶ ಧಿಕ್ಕರಿಸಿ ಶಾಲೆ ಕಾಲೇಜು ಬಳಿ ಪ್ರತಿಭಟನೆ ಮಾಡುತ್ತಿರುವವರ ನಡೆಯನ್ನು‌ ಖಂಡಿಸಿ ಹಾಗೂ ಅವರ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ, ಧಾರವಾಡದಲ್ಲಿ ಶ್ರೀ ರಾಮ ಸೇನೆಯ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶ್ರೀ ರಾಮ ಸೇನೆ ಧಾರವಾಡ ಜಿಕ್ಲಾ ಘಡಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ, ಕಾರ್ಯಕರ್ತರು ಹೈ ಕೋರ್ಟ್ ಆದೇಶ ಉಲ್ಲಂಘಿಸಿ ಶಾಲೆ ಕಾಲೇಜುಗಳ ಬಳಿ ಪ್ರತಿಭಟನೆ ನಡೆಸುವವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ಈಗಾಗಲೇ ಹೈ ಕೋರ್ಟ್ ಹಿಜಾಬ್ ವಿಚಾರದಲ್ಲಿ ಶಾಲೆ ಅಥವಾ ಕಾಲೇಜು ಆವರಣದಲ್ಲಿ ಯಾವುದೇ ಧಾರ್ಮಿಕ ಸೂಚಂಕದ ವಸ್ತ್ರಾಭರಣ ಹಾಕುವಂತಿಲ್ಲ ಎಂದು ಮಧ್ಯಂತರ ಆದೇಶವನ್ನು ಸ್ಪಷ್ಟವಾಗಿ ಹೊರಡಿಸಿದೆ. ಆದರೆ ಅದಕ್ಕೆ ಅಗೌರವ ತೋರುವ ನಿಟ್ಟಿನಲ್ಲಿ ರಾಜ್ಯದ ನೇರೆ ಬೇರೆ ಜಿಲ್ಲೆಗಳಲ್ಲಿ ಕೆಲವು ದುಷ್ಟ ಶಕ್ತಿಗಳು‌ ನಡೆದುಕೊಳ್ಳುತ್ತಿವೆ. ಇದು ಎಷ್ಟರಮಟ್ಟಿಗೆ ಸರಿ, ನಮ್ಮ ದೇಶದ ಸಂವಿಧಾನ ಹಾಗೂ ನ್ಯಾಯಾಲಯ ಆದೇಶ ಮೀರಿದವರು ಯಾರು ಇಲ್ಲ. ಆದರು ಹೈ ಕೋರ್ಟ್ ಆದೇಶವನ್ನು ಶಾಲೆ ಕಾಲೇಜುಗಳ ಬಳಿಯಲ್ಲಿ ಉಲ್ಲಂಘನೆ ಮಾಡಲಾಗುತ್ತಿದೆ. ಇದನ್ನು ಶ್ರೀ ರಾಮ ಸೇನೆ ಖಂಡಿಸುತ್ತದೆ, ಈ ವರ್ತನೆಯನ್ನು ದುಷ್ಟ ಶಕ್ತಿಗಳು ಕೈ ಬಿಟ್ಟು ಮಕ್ಕಳ‌ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯನ್ನು ನಡೆದುಕೊಳ್ಳಬೇಕು‌ ಎಂದು ಒತ್ತಾಯ‌ ಮಾಡಿದರು.

ಒಂದು ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮುಂದುವರೆದಲ್ಲಿ ಯಾವುದೇ ಕಾರಣಕ್ಕೂ ನಾವು ಸುಮ್ಮನೆ ಕುರುವುದಿಲ್ಲ, ನಾವು ಕೂಡಾ ರಾಜ್ಯ ವ್ಯಾಪಿ‌ ದುಷ್ಟ ಶಕ್ತಿಗಳ ವಿರುದ್ಧ ಪ್ರತಿಭಟನೆಗೆ ಇಳಿಯುತ್ತೆವೆ. ಕೂಡಲೇ ರಾಜ್ಯ ಸರ್ಕಾರ ಹೈ ಕೋರ್ಟ್ ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕಾನೂನು‌ ಕ್ರಮ ಜರುಗಿಸಬೇಕು‌ ಎಂದು ಅಗ್ರಹಿಸಿದರು.‌

Tags:

error: Content is protected !!