Belagavi

ಹಿಜಾಬ್ ವಿಚಾರವಾಗಿ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಮುಂದೆ ಹೈಡ್ರಾಮಾ: ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಯುವಕರು

Share

ಬೆಳಗಾವಿಯ ಸದಾಶಿವ ನಗರದ ಲಕ್ಷಿö್ಮÃ ಕಾಂಪ್ಲೆಕ್ಸ್ ಹತ್ತಿರದ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಕುರಿತಂತೆ ಹೈಡ್ರಾಮಾ ನಡೆದಿದೆ. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಗಿತ್ತು.
ಸದಾಶಿವ ನಗರದ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಧರಿಸುವ ಕುರಿತಂತೆ ಹೈಡ್ರಾಮಾ ನಡೆದಿದೆ. ಕಾಲೇಜು ಸಿಬ್ಬಂದಿ ಹಿಜಬನ್ನು ತೆಗೆದಿಟ್ಟು ಕಾಲೇಜು ಪ್ರವೇಶಿಸುವಂತೆ ಕಾಲೇಜು ಸಿಬ್ಬಂದಿ ಹೇಳುತ್ತಲೇ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿಯೊAದಿ ಹಾಗೂ ಪ್ರಾಂಶುಪಾಲರೊAದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯು ಪಟ್ಟು ಹಿಡಿದ್ದಾರೆ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಕ್ಲಾಸ್‌ಗೆ ಭಹಿಷ್ಕಾರ ಹಾಕಿ ಹೊರ ಹೋಗುತ್ತಿದ್ದರು. ಈ ವೇಳೆ ಪೊಲೀಸರು ಹಾಗೂ ಕಾಲೇಜು ಸಿಬ್ಬಂದಿ ವಿದ್ಯಾರ್ಥಿನಿಯರನ್ನು ತಡೆದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು.


ಇನ್ನು ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರು ತಿಳಿ ಹೇಳಿದರೂ ಹಿಜಾಬ್ ತೆಗೆಯುವುದಿಲ್ಲ ಕಾಲೇಜು ಒಳಗೆ ಹೋಗುವುದಿಲ್ಲ ಅಂತಾ ವಿದ್ಯಾರ್ಥಿಗಳುಯ ಪಟ್ಟು ಹಿಡಿದರು. ಈ ವೇಳೆ ಕಾಲೇಜಿನತ್ತ ಯುವಕರ ಗುಂಪೊAದು ಆಗಮಿಸಿ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಈ ವೇಳೆ ಡಿಸಿಪಿ ರವೀಂದ್ರ ಗಡಾದಿ ಯವಕರ ಮನವೊಲಿಸಲು ಹರಸಾಹಸ ಪಟ್ಟರು. ಈ ವೇಳೆ ಯುವಕರ ಗುಂಪು ಅಲ್ಲಾ ಹು ಅಕ್ಬರ್ ಅಂತಾ ಘೋಷಣೆ ಕೂಗುತ್ತಿದ್ದಂತೆ, ಪೊಲೀಸರು ಘೋಷಣೆ ಕೂಗಿದ ಹಿನ್ನೆಲೆ ೬ಜನ ಯುವಕರನ್ನು ವಶಕ್ಕೆ ಪಡೆದರು. ಇನ್ನು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಇನ್ನು ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಆರ್.ಕೆ.ಕುಲಕರ್ಣಿ ನ್ಯಯಾಲಯದ ಆದೇಶ ಪಾಲಿಸುವಂತೆ ಕಾಲೇಜು ಆಡಳಿತ ಮಂಡಳಿಗೆ ಹೇಳಿದರು. ವಿದ್ಯಾರ್ಥಿಗಳಿಗೆ ಎಂದಿನAತೆ ಪರೀಕ್ಷೆ ಬರೆಯಲು ಅವಕಾಶ ನೀಡಿದರು. ಈ ಸಂಧರ್ಬದಲಿ ಮಾಧ್ಯಮಗಲೊಂದಿಗೆ ಮಾತನಾಡಿದ ಆರ್.ಕೆ.ಕುಲಕರ್ಣಿ, ಮಮಗೆ ಈ ಘಟನೆ ಕುರಿತಂತೆ ಎಸಿಪಿ ಸದಾಶಿವ ಕಟ್ಟಿಮನಿಯವರಿಂದ ಫೋನ್ ಕಾಲ್ ಬಂತು. ಹಾಗಾಗಿ ನಾನು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ. ಇನ್ನು ಕಾಲೇಜು ಆಡಳಿತ ಮಂಡಳಿಗೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಹೇಳಿದ್ದೇವೆ. ಇನ್ನು ಪಾಲಕರು ಕೆಲವರು ಕಾಲೇಜು ಹೊರಗಡೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದರು.

ಇನ್ನು ಈ ಘಟನೆ ಕುರಿತಂತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ, ವಿಜಯ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜು ಬಳಿ ಕಾಲೇಜಿಗೆ ಸಂಬAಧವಿಲ್ಲದ ಯುವಕರು ಬಂದಿದ್ರು. ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದ್ದರು. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಯುವಕರು ಅಲ್ಲಾಹೋ ಅಕ್ಬರ್ ಘೋಷಣೆ ಕೂಗಿದ ಬಗ್ಗೆ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ನಗರದ ಎಲ್ಲಾ ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆ ಒದಗಿಸಲಾಗಿದೆ. ಕಾಲೇಜು ಗೇಟ್ ಬಳಿ ಯಾರೂ ಬರದಂತೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು ಬೆಳಗಾವಿ ನಗರದಲ್ಲಿ ಹಿಜಾಬ್ ವಿವಾದ ತೀವೃತೆ ಪಡೆದಿಕೊಂಡಿದೆ. ಇನ್ನು ಈಗಾಗಲೇ ನ್ಯಾಯಾಲಯ ಆದೇಶ ಪಾಲಿಸುವಂತೆ ಎಲ್ಲಾ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗೆ ತಿಳಿಸಲಾಗಿದೆ. ಇನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಂತತೆ ಕಾಪಾಡುವಂತೆ ಕೋರಲಾಗಿದೆ.

Tags:

error: Content is protected !!