ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸುವಂತೆ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ಕಾಲೇಜು ಆಡಳಿತ ಮಂಡಳಿಗೆ ಮನವಿ ಪತ್ರ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಎಂ ವ್ಹಿ ನಾಗಠಾಣ ಪಿಯ ಕಾಲೇಜಿ ವಿದ್ಯಾರ್ಥಿಗಳು ಪತ್ರ ಬರೆದು ಕಾಲೇಜು ಆವರಣದಲ್ಲಿ ಹಿಜಾಬ್ ನಿಷೇಧಿಸಿ ಎಂದು ಪತ್ರ ಬರೆದು ಕೋಮು ಗಲಭೆ ನಿಯಂತ್ರಿಸಲು ಹಿಜಾಬ್ ನಿಷೇಧಿಸಿ, ಸಮವಸ್ತ್ರ ಕಡ್ಡಾಯಗೊಳಿಸಿ ಎಂದು ಪತ್ರ ಬರೆದು ಕಾಲೇಜು ಆಡಳಿತ ಮಂಡಳಿ ಹಾಗೂ ತಹಶೀಲ್ದಾರರಿಗು ಮನವಿ ಪತ್ರ ನೀಡಿ ತಹಶೀಲ್ದಾರ್ ಕಚೇರಿ ಎದುರು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಕೇಸರಿ ಶಾಲು ಧರಿಸಿಯೇ ನಿಡಗುಂದಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಬಳಿಕ ಮನವಿ ಸಲ್ಲಿಸಿದರು.
