Vijaypura

ಹಿಜಾಬ್ ತಂತ್ರಗಾರಿಕೆ ನಾಟೋದಿಲ್ಲಾ;ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ

Share

ರಾಜ್ಯದಲ್ಲಿ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯಲ್ಲಿ ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೋಳೆ ಪ್ರತಿಕ್ರಿಯೆ ನೀಡಿದ್ದು ಇದು ಕಾಂಗ್ರೆಸ್ ಗಿಮಿಕ್.. ಇದೆಲ್ಲ ಮಾಡಿಸ್ತಿರೋದೆ‌ ಕಾಂಗ್ರೆಸ್, ಕಾಂಗ್ರೆಸ್ ತಂತ್ರ ಫಲಿಸೊಲ್ಲ ಎಂದಿದ್ದಾರೆ. ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾಸಕ ದುರ್ಯೋಧನ ಕಾಂಗ್ರೆಸ್ ಪಕ್ಷ ಒಡೆದು ಮೂರು ಹೋಳಾಗಿದೆ,

ಹಿಜಾಬ್ ವಿವಾದದ ಮೂಲಕ ಮುಂದಿನ ಚುನಾವಣೆಯಲ್ಲಿ ಸೀಟ್ ಬರಬಹುದು ಅನ್ನೋ ಲೆಕ್ಕಾಚಾರ ಕಾಂಗ್ರೆಸ್ ನದ್ದು. ಜನ ಜಾಗೃತರಾಗಿದ್ದಾರೆ, ಅದು ಸಾಧ್ಯವಾಗಲ್ಲ ಎಂದರು. ಕಾಂಗ್ರೆಸ್ ನಲ್ಲಿ ಮೂರು ಗುಂಪುಗಳಿವೆ.. ನೆಲೆ ಕಂಡುಕೊಳ್ಳಲು ಈ ತಂತ್ರ ಮಾಡಲಾಗುತ್ತಿದೆ. ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ, ಡಿಕೆಶಿ, ಪರಮೇಶ್ವರ್ ಮೂರು ಗುಂಪುಗಳಾಗಿವೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಗಿಮಿಕ್ ವರ್ಕೌಟ್ ಆಗೊಲ್ಲ ಎಂದರು.

ಹಿಜಾಬ್ ನಿಂದ ಕಾಂಗ್ರೆಸ್ ಗೆ ಹೊಡೆತ ಬೀಳಲಿದೆ, ಆದ್ರೆ ಬಿಜೆಪಿಗೆ ಯಾವುದೇ ಹಿನ್ನೆಡೆ ಇಲ್ಲ, ಸಿಎಂ ಕುರ್ಚಿಗಾಗಿ ಅವರಲ್ಲೆ ಕಚ್ಚಾಟ ಇದೆ, ಅವರಲ್ಲೆ ಮೂರು ಭಾಗಗಳಾಗಿವೆ.. ಕಾಂಗ್ರೆಸ್ ಪಕ್ಷದಲ್ಲಿ ಏನು ಉಳಿದಿಲ್ಲ ಎಂದರು. ಆದ್ದರಿಂದ ಹಿಜಾಬ್ ತಂತ್ರಗಾರಿಕೆ ನಾಟೋದಿಲ್ಲ ಎಂದರು. ಇನ್ನೂ ಸಿದ್ಧರಾಮಯ್ಯ ಸಂಪರ್ಕದಲ್ಲಿ ಬಿಜೆಪಿ ಶಾಸಕರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇದನ್ನ ಯಾರು ನಂಬಲ್ಲ, ಅವರ ಶಾಸಕರನ್ನೆ ಸಿದ್ಧರಾಮಯ್ಯ ಬಿಟ್ಟು ಕುಳಿತಿದ್ದಾರೆ,

ಅವರ ಶಾಸಕರನ್ನೆ ಅವರಿಗೆ ಸಂಬಾಳಿಸೋಕೆ ಆಗಿಲ್ಲ, ಕಾಂಗ್ರೆಸ್ ನಿಂದ ಬೇಸತ್ತು ಬಂದವರು ಅಲ್ಲಿಗ್ಯಾಕೆ ವಾಪಸ್ ಹೋಗ್ತಾರೆ ಎಂದರು. ಇವೆಲ್ಲ ಕೇವಲ ತಂತ್ರಗಾರಿಕೆ ಅಷ್ಟೇ, 2023ಕ್ಕೆ ಬಿಜೆಪಿ ಸರ್ಕಾರ ಪಕ್ಕಾ 130ಕ್ಕು ಅಧಿಕ ಸೀಟ್ ಮೂಲಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದುರ್ಯೋದನ ಐಹೋಳೆ‌, ಬಿಜೆಪಿ ಶಾಸಕರು, ರಾಯಭಾಗ, ಬೆಳಗಾವಿ ಜಿಲ್ಲೆ.

Tags:

error: Content is protected !!