ವಿಜಯಪುರದಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನಗರದ ಸರ್ಕಾರಿ ಮಹಿಳಾ ಪಿಯು ಕಾಲೇಜು ಎದುರು ಬಿಗಿ ಭದ್ರತೆ ಹಾಕಲಾಗಿದೆ. ಕಾಲೇಜು ಸುತ್ತ 200ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು 200ಮೀ ಅಂತರದಲ್ಲಿ ಬ್ಯಾರಿಕೇಡ್ ಹಾಕಿ ಮಾಧ್ಯಮಗಳಿಗು ಕಾಲೇಜು ಆವರಣ ಪ್ರವೇಶಕ್ಕೆ ನಿರ್ಭಂದ ಹೇರಲಾಗಿದೆ.
ಇನ್ನು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರ್ತಿದ್ದಾರೆ. ಕಾಲೇಜಿನ ಪ್ರಿನ್ಸಿಪಲ್ ಹಿಜಾಬ್, ಬುರ್ಕಾ ತೆಗೆದಿಡಲು 2 ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ್ದಾರೆ. ಕಾಲೇಜು ಎದುರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆ ಮಾಡಲಾಗಿದೆ. ಕಾಲೇಜು ಸುತ್ತ ಅನ್ಯ ಜನರು ಬರದಂತೆ ಪೊಲೀಸ್ ಬಂದೋಬಸ್ತ ಮಾಡಿ ಪ್ರತಿಭಟನೆಗಳಿಗೆ ಆಸ್ಪದ ಸಿಗದಂತೆ ಬಿಗಿ ವ್ಯವಸ್ಥೆ ಮಾಡಲಾಗಿದೆ.