ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಅದೇ ರೀತಿ ರಾಜ್ಯದಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಬೆಳಗಾವಿಯ ಮಾಜಿ ಶಾಸಕ ಫಿರೋಜ್ ಸೇಠ್ ಆಗ್ರಹಿಸಿದರು.

ಹೌದು ಗುರುವಾರ ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಹಿಜಾಬ್ ವಿಚಾರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅವರ ಗಮನಕ್ಕೆ ತಂದರು. ಸಾಕಷ್ಟು ಕಡೆ ರಸ್ತೆ ಪಕ್ಕದಲ್ಲಿಯೇ ಕಾಲೇಜು ಸಿಬ್ಬಂದಿ ಮತ್ತು ಪೊಲೀಸರು ವಿದ್ಯಾರ್ಥಿನಿಯರ ಹಿಜಾಬ್ ತೆಗೆಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಹೀಗಾಗಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿಕೊಂಡರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಫಿರೋಜ್ ಸೇಠ್ ಹಿಂದೂ, ಮುಸ್ಲಿಂ, ಕ್ರೈಸ್ತ್ ಯಾವುದೇ ಧರ್ಮದ ಇರಲಿ ಎಲ್ಲರೂ ನಮ್ಮ ಮಕ್ಕಳೆ. ಹಿಜಾಬ್ ಧರಿಸುವುದು ಭಾರತೀಯ ಸಂಸ್ಕøತಿಯಾಗಿದೆ. ಹೀಗಾಗಿ ನಮ್ಮ ಸಂಸ್ಕøತಿಯನ್ನು ತಡೆಯುವ ಕೆಲಸ ಮಾಡಬೇಡಿ. ಕೆಲ ದುಷ್ಟ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿ ವರ್ತಿಸಬೇಕು. ಎಲ್ಲ ಧರ್ಮಗಳ ಮಹಿಳೆಯರನ್ನು ಗೌರವದಿಂದ ಕಾಣುವ ಕೆಲಸ ಆಗಬೇಕು ಎಂದರು.
ಮುಂದುವರಿದು ಮಾತನಾಡಿದ ಫಿರೋಜ್ ಸೇಠ್ ಕಾಲೇಜುಗಳ ಗೇಟ್ ಮುಂದೆ ಯಾವುದೇ ವಿದ್ಯಾರ್ಥಿನಿಯನ್ನು ತಡೆಯಬಾರದು. ಇದು ಚರ್ಚೆಯ ವಿಷಯ ಆಗಬಾರದು. ವಿಡಿಯೋಗಳು ಯಾವುದೇ ಕಾರಣಕ್ಕೂ ವೈರಲ್ ಆಗಬಾರದು. ಯಾರು ಇಂತಹ ಕೆಲಸ ಮಾಡುತ್ತಾರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚಿನ ಸಂದರ್ಭದಲ್ಲಿ ಮಾತ್ರ ಪೊಲೀಸರನ್ನು ಬಳಸಿಕೊಳ್ಳಬೇಕು. ಪೊಲೀಸರು ರಸ್ತೆ ಪಕ್ಕದಲ್ಲಿ ನಿಂತು ಹಿಜಾಗ್ ತೆಗೆಸುವ ಏಜೆಂಟ್‍ಗಳು ಆಗಬಾರದು ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಅಂಜುಮನ್ ಕಮೀಟಿ ಅಧ್ಯಕ್ಷ ರಾಜು ಸೇಠ್, ನಗರಸೇವಕ ಸಲೀಂ ಮಾಡಿವಾಲೆ, ಅಷ್ಫಾಕ್ ಘೋರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.