Banglore

ಹಿಜಾಬ್ ಕೇಸ್ ಬಗ್ಗೆ ಸುಪ್ರೀಂಗೆ ಹೋಗೋರು ಹೋಗಲಿ: ಬಿ.ಸಿ.ನಾಗೇಶ್

Share

ಹಿಜಾಬ್-ಕೇಸರಿ ಶಾಲು ವಿವಾದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಪ್ರೀಂಗೆ ಹೋಗೋರು ಹೋಗಲಿ. ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿಕೆ ನೀಡಿದ್ದಾರೆ.

ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಲಾಯರ್‍ಗಳನ್ನ ಇಟ್ಟು ಕೋರ್ಟನಲ್ಲಿ ವಾದ ಮಾಡೋ ಶಕ್ತಿ ನನಗಂತೂ ಇಲ್ಲ, ಕಾಲೇಜಿನ ಆ ಹುಡುಗೀರಿಗೂ ಅ ಶಕ್ತಿ ಇರಲ್ಲ. ಆದರೆ ಯಾರೋ ಈ ವಿದ್ಯಾರ್ಥಿನಿಯರ ಹಿಂದೆ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇಡೀ ಪ್ರಕರಣದ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅನ್ನಿಸುತ್ತಿದೆ. ಅವರು ಹೀಗೆಲ್ಲಾ ಮಾಡಿಸುತ್ತಿದ್ದಾರೆ. ಸುಪ್ರೀಂಗೆ ಹೋಗೋರು ಹೋಗಲಿ… ನಮ್ಮದೇನು ಅಭ್ಯಂತರ ಇಲ್ಲ. ಕೋರ್ಟ್ ಏನು ತೀರ್ಮಾನ ಮಾಡುತ್ತೋ ನೋಡೋಣ. ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಕಾಲೇಜಿಗೆ ಎಂಟ್ರಿ ಎಂದು ಇದೇ ವೇಳೆ ಬಿ.ಸಿ.ನಾಗೇಶ್ ಖಡಕ್ ಎಚ್ಚರಿಕೆ ನೀಡಿದರು.

ಮುಂದುವರಿದು ಮಾತನಾಡಿದ ಬಿ.ಸಿ.ನಾಗೇಶ್ ಕೋರ್ಟ್‍ನಲ್ಲಿ ವಾದ ಮಾಡ್ತಿರೋರು ಕಾಂಗ್ರೆಸ್‍ನ ಪ್ರಮುಖರು. ಕಪಿಲ್ ಸಿಬಲ್ ಯಾರು..? ಕಾಮತ್ ಯಾರು..? ಹೆಗ್ಡೆ ಯಾರು..? ಇವೆಲ್ಲ ನೋಡಿದರೆ ಅನುಮಾನ ಬರೋದು ಸಹಜ. ಹೀಗಾಗಿ ಇದರ ಹಿಂದೆ ಕಾಂಗ್ರೆಸ್ ಇದೆ ಅಂತ ನನಗೆ ಅನುಮಾನ ಬರುತ್ತಿದೆ ಎಂದು ಆರೋಪಿಸಿದರು.

 

Tags:

error: Content is protected !!