ಕೇಸರಿ, ಹಿಜಾಬ್ ವಿವಾದ ರಾಜ್ಯಾಧ್ಯಂತ ಭುಗಿಲೆದ್ದಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಕಾಲೇಜು ಕ್ಯಾಂಪಸ್ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಇಂದು ಬನಹಟ್ಟಿ ಬಂದ್‍ಗೆ ಕರೆ ನೀಡಿದ್ದ ಹಿಂದೂಪರ ಸಂಘಟನೆಗಳಿಗೆ ಪೊಲೀಸರು ತಡೆ ಹಿಡಿದಿದ್ದಾರೆ.

ಹೌದು ಬನಹಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೇಲೆ ನಡೆದ ಕಲ್ಲು ತೂರಾಟದಿಂದ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ಬುಧವಾರ ಬನಹಟ್ಟಿ ಬಂದ್‍ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಹಿಂದೂಪರ ಸಂಘಟನೆಗಳು ಮುಂದಾಗುತ್ತಿದ್ದಂತೆ ಪೊಲೀಸರು ತಡೆದರು.
ಪ್ರತಿಭಟನೆಗೆ ಪರವಾಣಿಗೆ ಪಡೆದಿಲ್ಲ, ಮೆರವಣಿಗೆ ಬೇಡ ಎನ್ನುತ್ತಿದ್ದಂತೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯ ವಾಗ್ವಾದ ನಡೆಯಿತು.
ಬರೀ ಮನವಿ ಸಲ್ಲಿಸಲು ಮಾತ್ರ ಪೊಲೀಸರು ಹಿಂದೂಪರ ಕಾರ್ಯಕರ್ತರಿಗೆ ಪೊಲೀಸರು ಅನುಮತಿ ನೀಡಿರುವ ಹಿನ್ನೆಲೆ ಬನಹಟ್ಟಿ ಪೆÇಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.