Belagavi

ಹಿಜಾಬ್ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ ಆಗಿತ್ತು: ಈರಣ್ಣಾ ಕಡಾಡಿ

Share

ಹಿಜಾಬ್ ಕಾಂಗ್ರೆಸ್ಸಿನ ಹಿಡನ್ ಅಜೆಂಡಾ ಆಗಿತ್ತು. ಶಾಲೆಗಳಲ್ಲಿ ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ಮಕ್ಕಳ ಮಧ್ಯೆ ವಿಷ ಬೀಜಗಳನ್ನ ಬಿತ್ತಬಾದು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡದ ಅವರು, ಹಿಜಾಬ್‍ನ್ನು ರಾಜ್ಯದಲ್ಲಿ ಪ್ರತಿಪಾದನೆ ಮಾಡವುದೇ ಕಾಂಗ್ರೆಸ್‍ನ ಹಿಡನ್ ಅಜಂಡಾ ಆಗಿತ್ತು. ಆದರೆ ಕಾಂಗ್ರೆಸ್ ಈ ರೀತಿ ಮಕ್ಕಳಲ್ಲಿ ವಿಷಬೀಜಗಳನ್ನು ಬಿತ್ತುವ ಕೆಲಸ ಮಾಡಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಕೋರ್ಟ್ ಅದಕ್ಕೆ ಸರಿಯಾದ ನಿರ್ಣಯ ಕೈಗೊಂಡಿದೆ. ಶಾಲಾ ಆವರಣದಲ್ಲಿ ರಾಜಕೀಯ ಮಾಡಲಾರದೇ, ಧರ್ಮದ ವಿಷಬೀಜ ಬಿತ್ತಲಾರದೇ ಶೈಕ್ಷಣಿಕ ಕಲಿಕೆ ಅವಕಾಶ ಮಾಡಿಕೊಡಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸವನ್ನ ಕಾಂಗ್ರೆಸ್ ಶಿಕ್ಷಣದ ಮೂಲಕ ಮಾಡಲು ಹೊರಟಿದ್ದಾರೆ. ಇದು ಅಕ್ಷಮ್ಯ ಅಪರಾಧ. ಇದನ್ನ ನಾವು ರಾಜಕೀಯ ಮೀರಿನಿಂತು ನೋಡಬೇಕು.

ರಾಜ್ಯದಲ್ಲಿ ಎಲ್ಲದಕ್ಕೂ ಆರ್‍ಎಸ್‍ಎಸ್ ತರೋದು ಎಲ್ಲದಕ್ಕೂ ಬಿಜೆಪಿ ತರೋದು ಕಾಂಗ್ರೆಸ್‍ಗೆ ಒಳ್ಳೆಯದಲ್ಲ ಎಂದರು.
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾಡಿದ ಹಿಜಾಬ್ ಕೇಸರಿ ಶಾಲು ವಿಚಾರ ಕುರಿತಂತೆ ಮಾತನಾಡಿದ ಅವರು, ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಇದ್ದನ್ನ ಮಾಡಿದ್ದಾರೆ. ಇದೊಂದು ಟೂಲ್ ಕಿಟ್ ಈ ವಿಚಾರದಲ್ಲಿ ಮಾಧ್ಯಮದಲ್ಲಿ ಬಹಿರಂಗವಾಗಿದೆ. ಸೋಶಿಯಲ್ ಮಿಡಿಯಾ ದುರುಪಯೋಗ ಆಗ್ತಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸುತ್ತಿದೆ. ಕಾಂಗ್ರೆಸ್ ಈ ರೀತಿ ಕೀಳು ರಾಜಕೀಯ ಮಾಡಬಾರದು. ಯಾವ ಕೆಲಸ ಆಗಿಲ್ಲ ಅದನ್ನ ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶ ಇದೆ. ಇದನ್ನ ಬಿಟ್ಟು ಈ ರೀತಿ ಶಿಕ್ಷಣ ಕ್ಷೇತ್ರವನ್ನ ಕೆಡಿಸುವ ಕೆಲಸ ಆಗಬಾರದು. ಆ ಮಕ್ಕಳು ಈ ಶಾಲಾ ಆವರಣದಲ್ಲಿ ಯಾವ ರೀತಿ ಇರಬೇಕಿತ್ತು ಹಾಗಿಲ್ಲ. ಆದ್ರು ಆ ಮಕ್ಕಳಿಗೆ ಶಿಕ್ಷಣ ಕೊಡ್ತಿವಿ ಅಂತಾ ಶಾಲೆ ಪ್ರಿನ್ಸಿಪಲ್ ಹೇಳಿದ್ದಾರೆ ಎಂದರು.

 

Tags:

error: Content is protected !!