Belagavi

ಹಿಂಡಲಗಾ ಜೈಲಲ್ಲಿ ಕೊಲೆ ಆರೋಪಿ ಅನುಮಾನಾಸ್ಪದ ಸಾವು

Share

ಕೇರಳದ ಕುಖ್ಯಾತ ರೌಡಿ ತಸ್ಲಿಮ್ ಹತ್ಯೆ ಕೇಸ್‍ನ ಆರೋಪಿ ಆರೋಪಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಂಭವಿಸಿದೆ.

ಹೌದು ಗುರುರಾಜ್ ದೊಡ್ಡಮನಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕೈದಿ. ಕಳೆದ ನಾಲ್ಕು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿರುವುದಾಗಿ ಸಂಬಂಧಿಗೆ ಹೇಳಿಕೊಂಡಿದ್ದ ಆರೋಪಿ ಗುರುರಾಜ್ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ. ಎದೆ ನೋವು ಕಾಣಿಸಿಕೊಂಡಿದೆ, ಐದನೂರು ರೂಪಾಯಿ ನೀಡುವಂತೆ ಗುರುರಾಜ್ ಸಂಬಂಧಿಗೆ ಕೇಳಿದ್ದನು.

ಇದಾದ ಕೆಲವೇ ಗಂಟೆಗಳಲ್ಲಿ ಆತ ಮೃತಪಟ್ಟಿದ್ದಾನೆ. ಇನ್ನು ಸಾವಿನ ಸುದ್ದಿಯನ್ನು ಜೈಲು ಸಿಬ್ಬಂದಿ ಗುರುರಾಜ್ ಕುಟುಂಬಸ್ಥರಿಗೆ ತಿಳಿಸಿದ್ದು, ಹದಿನೈದು ದಿನಗಳ ಹಿಂದೆ ಆರೋಪಿ ಗುರುರಾಜ್ ಮೇಲೆ ಜೈಲು ಸಿಬ್ಬಂದಿ ಹಲ್ಲೆ ನಡೆಸಿದ್ದರು, ಇದಾದ ಬಳಿಕ ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಇನ್ನು ಗುರುರಾಜ್ ಸಾವಿಗೆ ಹಿಂಡಲಗಾ ಜೈಲು ಸಿಬ್ಬಂದಿಯೇ ಕಾರಣ ಎಂದು ಮೃತನ ಸಹೋದರ ಕಿರಣ್ ಆರೋಪಿಸಿದ್ದಾನೆ.

ಅಲ್ಲದೇ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಜೈಲು ಸಿಬ್ಬಂದಿ ವಿರುದ್ಧ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ. 2019ರಲ್ಲಿ ಕೊಲೆ ಪ್ರಕರಣದಲ್ಲಿ ಗುರುರಾಜ್ ಹಿಂಡಲಗಾ ಜೈಲು ಸೇರಿದ್ದ. ಒಟ್ಟಿನಲ್ಲಿ ಜೈಲು ಸಿಬ್ಬಂದಿಯ ಹಲ್ಲೆಯಿಂದಲೇ ಆರೋಪಿ ಗುರುರಾಜ್ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದ್ದು. ಸತ್ಯಾಸತ್ಯತೆ ಪೊಲೀಸರ ಸಮಗ್ರ ತನಿಖೆಯಿಂದಲೇ ಗೊತ್ತಾಗಬೇಕಿದೆ.

 

Tags:

error: Content is protected !!