Belagavi

ಹಿಂಡಲಗಾ ಅರಗನ್ ತಾಲಾಬ್ ತಾಯಿ-ಮಕ್ಕಳ ಸಾವು ಪ್ರಕರಣ: ಓರ್ವ ಆರೋಪಿ ಅರೆಸ್ಟ್

Share

ಬೆಳಗಾವಿಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಕೆರೆಗೆ ಹಾರಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಲೇ ತನಿಖೆಯನ್ನು ನಡೆಸುತ್ತಿದ್ದು ಓರ್ವ ಆರೋಪಿಯನ್ನು ಬಂಧಿಸಿಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಬೋರಲಿಂಗಯ್ಯ ತಿಳಿಸಿದ್ದಾರೆ.

ನಗರದಲ್ಲಿ ಹಿಂಡಲಗಾ ಅರಗನ್ ತಾಲಾಬ್‍ಗೆ ಹಾರಿ ತಾಯಿ ಹಾಗೂ ಇಬ್ಬರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಪೊಲೀಸ್ ಆಯುಕ್ತರಾದ ಡಾ.ಬೋರಲಿಂಗಯ್ಯ, ಬೆಳಗಾವಿಯಲ್ಲಿ ತಾಯಿ ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೆ ಪ್ರಕರಣನ್ನು ದಾಖಲಿಸಿಕೊಂಡು ತನಿಖೆ ನಡೆಸುತಿದ್ದೇವೆ. ಈ ಕುರಿತು ಈಗಾಗಲೇ ಮನೀಶ್ ಕೇಶವಾನಿ ಎಂಬ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಉಳಿದ ಆರೋಪಿಗಳನ್ನು ಬಂಧಿಸಲು ನಮ್ಮ ಪೊಲೀಸ್ ತಂಡ ಕಾರ್ಯಪ್ರವೃತ್ತವಾಗಿದೆ. ಆದಷ್ಟು ಬೇಗನೇ ಅವರನ್ನೂ ಕೂಡ ಬಂಧಿಸಲಾಗುವುದು ಎಂದರು.

ಇನ್ನು ಈ ಪ್ರಕರಣ ಸಂಬಂಧ ತನಿಖೆ ನಡೆಸುವಲ್ಲಿ ವಿಳಂಬವಾದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಯಲ್ಲಿ ಮೃತ ಶರೀರ ಸಿಗಲು ವಿಳಂಬವಾಯಿತು. ಇನ್ನು ಮಹಿಳೆಯ ಕುಟುಂಬಸ್ಥರು ದೂರು ನೀಡುವಲ್ಲಿ ಗೊಂದಲವಿದ್ದ ಕಾರಣ ವಿಳಂಬ ಮಾಡಿದ್ದಾರೆ. ಹಾಗಾಗಿ ಪ್ರಕರಣವನ್ನು ದಾಖಲಿಸಿಕೊಳ್ಳುವಲ್ಲಿ ವಿಳಂಬವಾಯಿತು. ಇನ್ನು ಈ ಕುರಿತಂತೆ ಈಗಾಗಲೆ ತನಿಖೆ ಪ್ರಾರಂಭಿಸಿದ್ದೇವೆ ಎ|ಂದರು.

ಇನ್ನು ಬೆಳಗಾವಿ ನಗರದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಇತ್ತೀಚೆಗೆ ನಗರದಲ್ಲಿ ಕಳ್ಳತನ ಹಾಗೂ ಚೈನ್ ಸ್ಮ್ಯಾಶಿಂಗ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ಕುರಿತಂತೆ ಕೆಲ ಪ್ರಕರಣಗಳು ವರದಿಯಾಗಿವೆ. ಇನ್ನು ಈ ಕುರಿತಂತೆ ಕ್ರಮ ಕೈಗೊಳ್ಳುತ್ತೇವೆ. ಇನ್ನು ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ನಮಗೆ ಇರಾನಿ ಗ್ಯಾಂಗ್ ಮೇಲೆ ಸಂಶಯವಿದೆ. ಈ ಕುರಿತಂತೆ ಹಳೆಯ ದಾಖಲೆಗಳನ್ನ ನಾವು ನೋಡುತ್ತಿದ್ದೇವೆ. ಈ ಕುರಿತಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಇನ್ನು ಬೆಳಗಾವ ನಗರದಲ್ಲಿ ದಿನದಿಂ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇರಾನಿ ಗ್ಯಾಂಗ್ ಈ ಹಿಂದೆ ಕಾರ್ಯ ಮಾಡುತ್ತಿದೆಯಾ ಎಂಬ ಸಂಶಯ ವ್ಯಕ್ತವಾಗಿದೆ. ಆದಷ್ಟು ಬೇಗನೇ ಪೊಲೀಸರು ಈ ಕಳ್ಳರ ಹೆಡೆಮುರಿ ಕಟ್ಟಿ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಬೇಕೆಂಬುದೇ ಎಲ್ಲರ ಆಶಯ.

Tags:

error: Content is protected !!