ಸೈನ್ಯದಲ್ಲಿ 20 ವರ್ಷ ಸೇವೆಗೈದು ನಿವೃತ್ತಿ ಹೊಂದಿ ಇಂದು ಮನೆಗೆ ಆಗಮಿಸಿದ ಸೈನಿಕನಿಗೆ ಗ್ರಾಮಸ್ಥರ, ಜನಪ್ರತಿನಿಧಿಗಳು ಸೇರಿದಂತೆ ಶಾಲಾ ಮಕ್ಕಳು ಸಹಿತ ಹೂ ಮಳೆ ಸುರಿದು ಅದ್ದೂರಿಯಾಗಿ ಸ್ವಾಗತ ಕೋರಿದರು. ಈ ಕುರಿತು ಒಂದು ಕಂಪ್ಲೀಟ್ ವರದಿ ಇಲ್ಲಿದೆ ನೋಡಿ…
ಹೌದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಯೋಧ ಸಿದ್ದಪ್ಪ ಹೋಗಾರ ಎಂಬಾತರು ಬರೋಬ್ಬರಿ 20 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿ ಫೆ 1 ರಂದು ನಿವೃತ್ತಿಯಾದರು. ನಿವೃತ್ತಿಯ ಬಳಿಕ ಇಂದು ಅವರು ಊರಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಊರಿನ ಗ್ರಾಮಸ್ಥರೇ ಸಂತಸಗೊಂಡಿದ್ದರು. ಇಂದು ಅವರು ಊರಿಗೆ ಬರುತ್ತಲೇ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದರು. ಇನ್ನೂ ಗ್ರಾಮದಲ್ಲಿರುವ ಮಾಜಿ ಸೈನಿಕರು ಸಹಿತ ಸೆಲ್ಯೂಟ್ ಹೊಡೆದು ನಿವೃತ್ತ ಯೋದ ಸಿದ್ದಪ್ಪ ಅವರಿಗೆ ಗೌರವಿಸಿದರು. ಇನ್ನೂ ಭಾಜಾ ಭಜಂತ್ರಿಯೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಅಲ್ಲದೇ ಸರಕಾರಿ ಶಾಲಾ ಮಕ್ಕಳ ಸಹಿತ ರಸ್ತೆಯ ಎರಡು ಬದಿಗೆ ನಿಂತು ಯೋಧನಿಗೆ ಹೂ ಮಳೆ ಸುರಿಯುತ್ತ ಜೈ ಜವಾನ ಎಂಭ ಘೋಷಣೆಗಳನ್ನು ಕೂಗಿ ಗೌರವಿಸಿದರು. ಇದೇ ವೇಳೆ ಯೋಧ ಸಿದ್ದಪ್ಪ ಅವರ ಪತ್ನಿ ಶೃತಿ ಮಾತನಾಡಿ ಕಳೆದ 20 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಜೀವಂತವಾಗಿ ಮನೆ ಸೇರಿದ್ದಾರೆ, ಯಾವುದೇ ಸಂದರ್ಭದಲ್ಲಿ ಇವರು ಕರ್ತವ್ಯಕ್ಕೆ ಹೋಗಲು ಸಿದ್ಧರಾಗಿರುತ್ತಿದ್ದರು ಇದರಿಂದ ಬಹಳ ಸಂತೋಷವಾಗುತ್ತದೆ. ಗ್ರಾಮದ ಜನರು ಸಹ ಪ್ರೀತಿಯಿಂದ ಗ್ರಾಮಕ್ಕೆ ಬರಮಾಡಿಕೊಂಡಿರುವುದು ಸಂತೋಷವೆನಿಸುತ್ತದೆ ಎಂದರು…
ಕಾಲೇಜು ಶಿಕ್ಷಣವನ್ನು ಸ್ವ ಗ್ರಾಮ ಢವಳಗಿಯಲ್ಲಿಯೇ ಮುಗಿಸಿದ ಸೈನಿಕ ಸಿದ್ದಪ್ಪ ಹೂಗಾರ, ದೇಶ ಸೇವೆ ಮಾಡಬೇಕು ಎಂಬ ಹಂಬಲದಿಂದ ಭಾರತೀಯ ಸೇನೆಯ ಭರ್ತಿ ಕ್ಯಾಂಪ್ ನಲ್ಲಿ ಭಾಗವಹಿಸಿ ಮೊದಲ ಪ್ರಯತ್ನದಲ್ಲೇ ಸೆಲೆಕ್ಟ ಕೂಡಾ ಆದರು. ಬೆಂಗಳೂರಿನಲ್ಲಿ ಆರ್ಮಿ ಟ್ರೇನಿಂಗ್ ಸೆಂಟರ್ ನಲ್ಲಿ ತರಬೇತಿ ಪಡೆದು ಜಮ್ಮು ಕಾಶ್ಮೀರ, ಪಂಜಾಬ್, ಚಂಡೀಗಡ, ಶ್ರೀನಗರ, ಕಾರ್ಗಿಲ್ ಸೇರಿದಂತೆ ಹಲವೆಡೆ ಕೆಲಸವನ್ನು ನಿರ್ವಹಿಸಿದ್ದಾರೆ. ಈ ಕುರಿತು ಮಾತನಾಡಿದ ಯೋಧ ಸಿದ್ದಪ್ಪ ಹೂಗಾರ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ 2012 ರಿಂದ ಜಮ್ಮು ಕಾಶ್ಮಿರ, ರಾಜಸ್ಥಾನ, ಚಂಡಿಗಡ, ಉತ್ತರಪ್ರದೇಶ, ಕಾರ್ಗಿಲ್ ಸೇರಿದಂತೆ ವಿವಿಧೆಡೆ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು. ಇನ್ನೂ ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು…
ಸತತ ಇಪ್ಪತ್ತು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಮನೆಗೆ ಮರಳಿದ ಸೈನಿಕನಿಗೆ ಅದ್ದೂರಿ ಸ್ವಾಗತ ಕೋರಿರುವದು ನಿಜಕ್ಕೂ ದೇಶ ಪ್ರೇಮ ಎತ್ತಿ ತೋರುತ್ತಿದೆ ಜೊತೆಗೆ ಸೈನಿಕನ ಬಗ್ಗೆ ಇರುವಂತಹ ಗೌರವ ಎದ್ದು ಕಾಣುತ್ತದೆ…