ಕಾಂಗ್ರೆಸ್‍ನಿಂದ ಬಹುತೇಕ ಹೊರಗೆ ಬಂದಿರುವ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಅವರನ್ನು ಖಾನಾಪೂರ ಜೆಡಿಎಸ್ ಯುವ ಮುಖಂಡ ಆಲೀಮ್ ಅಕ್ತರ್ ನಾಯಿಕ್ ಭೇಟಿಯಾಗಿದ್ದು ಸಧ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೌದು ಖಾನಾಪೂರ ಜೆಡಿಎಸ್ ಯುವ ಮುಖಂಡ ಧಾರವಾಡದ ರಾಯಲ್ ಕಿಚನ್ ಮಾಲೀಕ ಆಲೀಮ್ ಅಕ್ತರ್ ನಾಯಿಕ ಅವರು ಕೇಂದ್ರದ ಮಾಜಿ ಸಚಿವ ರಾಜ್ಯದ ಪ್ರಭಾವಿ ರಾಜಕಾರಣಿ ಸಿ.ಎಂ.ಇಬ್ರಾಹಿಂ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಬಗ್ಗೆ ಬಿಸಿ ಬಿಸಿ ಚರ್ಚೆ ಇರುವ ಕಾರಣ ಯುವ ಅಲ್ಪಸಂಖ್ಯಾತರ ಮುಖಂಡರಲ್ಲಿ ಅವರ ಮುಂದಿನ ರಾಜಕೀಯ ಹೆಜ್ಜೆಯ ಬಗ್ಗೆ ಕುತೂಹಲ ಮೂಡಿಸಿದೆ ಇದಕ್ಕಾಗಿಯೇ ಆಲೀಂ ಅಕ್ತರ್ ನಾಯಿಕ ಅವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.