ಇತ್ತಿಚಿಗೆ ಚಳ್ಳಕೆರೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲಿನ ಹಲ್ಲೆ ಖಂಡಿಸಿ ಇಂದು ಹುಕ್ಕೇರಿ ಪಟ್ಟಣದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿದರು .
ಹುಕ್ಕೇರಿ ಪಟ್ಟಣದ ತಹಶಿಲ್ದಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರಾಜ್ಯ ಸರಕಾರಿ ನೌಕರರ ಸಂಘ,ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪಂಚಾಯತ ರಾಜ್ ನೌಕರರ ಸಂಘದದಿಂದ ಪ್ರತಿಭಟನೆ ನಡೆಸಿ ಸರಕಾರಿ ಅಧಿಕಾರಿಗಳ ಮೇಲೆ ಆಗುತ್ತಿರುವ ಹಲ್ಲೆಗಳನ್ನ ಖಂಡಿಸಿ, ಮನವಿಯನ್ನು ತಹಶಿಲ್ದಾರ ಡಾ, ದೋಡ್ಡಪ್ಪಾ ಹೂಗಾರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು .
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸರಕಾರಿ ನೌಕರರ ಸಂಘದ ಹುಕ್ಕೇರಿ ತಾಲೂಕು ಘಟಕದ ಅಧ್ಯಕ್ಷ ಅವಿನಾಶ ಹೊಳೆಪ್ಪಗೊಳ ಚಳ್ಳಕೆರೆ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಹಲ್ಲೆ ನಡೆಸಿರುವುದು ಖಂಡನೀಯ .ಕೂಡಲೇ ಹಲ್ಲೆ ಮಾಡಿದ ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಪಡೆಸಿ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸರ್ಕಾರಿ ನೌಕರರ ಮೇಲೆ ದೌರ್ಜನ್ಯ ನಡೆಸಿದವರ ಮೇಲೆ ಕಠಿಣ ಕಾನೂನು ರಚಿಸಬೇಕು ಎಂದು ಆಗ್ರಹಿಸಿದರು.
ಉಪತಹಸಿಲ್ದಾರ ಎನ್ ಆರ್ ಪಾಟೀಲ ಮಾತನಾಡಿ ಮೇಲಿಂದ ಮೇಲೆ ಸರ್ಕಾರಿ ನೌಕರರ ಮೇಲೆ ಹಲ್ಲೆಗಳು ಜರಗುತ್ತಲಿವೆ ಇದರಿಂದಾಗಿ ಭಯದ ನೆರಳಿನಲ್ಲಿ ಕೇಲಸ ಮಾಡುವ ಅಧಿಕಾರಿಗಳು ಗಳಿಗೆ ಸೂಕ್ತ ರಕ್ಷಣೆ ಅವಶ್ಯವಾಗಿದೆ ಎಂದರು,
ಈ ಸಂದರ್ಭದಲ್ಲಿ ಆರ್ ಎ ಚಟ್ನಿ, ಎನ್ ಬಿ ಗುಡಸಿ,ಎಸ್ ಎಸ್ ಕರಿಗಾರ,ಎನ್ ಆರ್ ಪಾಟೀಲ,ಗೌತಮ ಎಸ್ ಚಲವಾದಿ,ನವಿನ ಬಾಯನಾಯಕ, ಬಿ ಎನ್ ಚೌಗಲಾ,ಹಾಗೂ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು .