ಬೆಳಗಾವಿಯಲ್ಲಿ ಇತ್ತೀಚಿಗೆ ವಾಹನಗಳ ನೊಂದಣಿ ಸಂಖ್ಯೆಗಳು ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿ ಅಳವಡಿಸಿಕೊಳ್ಳುವುದು ಪ್ರವೃತ್ತಿಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಂಬರ್ ಪ್ಲೇಟ್ ತಯಾರಿಸುವ ಅಂಗಡಿಕಾರ ರಲ್ಲಿ ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸಿದರು.

ಬೆಳಗಾವಿ ಚವ್ಹಾಟ ಗಲ್ಲಿಯ ಆರ್‍ಟಿಓ ಸರ್ಕಲ್ ಹತ್ತಿರದ ಅಂಗಡಿಕಾರರು ಇತ್ತಿಚಿಗೆ ವಾಹನಗಳಿಗೆ ತಮಗೆ ಬೇಕಾದ ರೀತಿಯಲ್ಲಿ ನೊಂದಣಿ ಸಂಖ್ಯೆಗಳನ್ನು ತಯಾರಿಸಿ ಆಳವಡಿಸಿಕೊಳ್ಳುವುದು ಪ್ರವೃತ್ತಿಯಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಂಬರ್ ಪ್ಲೇಟ್ ತಯಾರಿಸುವ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು. ಸರ್ಕಾರದ ನಿಯಾಮಾವಳಿಯಂತೆ ನಂಬರ್ ಪ್ಲೇಟ್ ತಯಾರಿಸಿ ಕೊಡುವಂತೆ ಸೂಚಿಸಲಾಯಿತು.

ಈ ವೇಳೆ ಟ್ರಾಫಿಕ್ ಪೊಲೀಸ್ ಎಸಿಪಿ ಶರಣಪ್ಪಾ, ಸಿಪಿಐ ಶ್ರೀಶೈಲ್ ಮತ್ತು ಮಂಜುನಾಥ ನಾಯಕ ಆರ್‍ಟಿಓ ಅಂಗಡಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.