Belagavi

ಸರಕಾರಿ ನಿಯಮದ ಪ್ರಕಾರ ಎಸ್‍ಸಿ ಸಮುದಾಯಕ್ಕೆ ಸ್ಮಶಾನ ಭೂಮಿಯಲ್ಲೂ ಶೇ.25ರಷ್ಟು ಭೂಮಿ ಕೊಡಿ..!

Share

ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಸ್ಮಶಾನದಲ್ಲಿ ಪರಿಶಿಷ್ಟಜಾತಿ ಸಮುದಾಯಕ್ಕೆ ಸರಕಾರಿ ನಿಯಮಾವಳಿ ಪ್ರಕಾರ ಒಟ್ಟು ಸ್ಮಶಾನ ಭೂಮಿಯ ಶೇ25ರಷ್ಟನ್ನು ಮೀಸಲಿಡುವಂತೆ ನಿಲಜಿಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಯುವಕ ಮಂಡಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ಹದ್ದೆಯ ಸರ್ವೇ ನಂ 238/ಬಿಯ 1ಎಕರೆ 16ಗುಂಟೆ ಸರಕಾರಿ ಜಮೀನಿನಲ್ಲಿ ಸ್ಮಶಾನವಿದೆ. ಇದುವರೆಗೂ ನಿಲಜಿ ಗ್ರಾಮದಲ್ಲಿ ಪರಿಶಿಷ್ಟಜಾತಿಯ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಯಾವುದೇ ರೀತಿಯ ಸ್ಮಶಾನ ಇರುವುದಿಲ್ಲ. ಈ ಕುರಿತಂತೆ ತಹಶೀಲ್ದಾರರಿಗೆ ಮನವಿ ಮಾಡಿದಾಗ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಶಿಷ್ಟ ಜಾತಿಯವರಿಗೆ ಸ್ಮಶಾನ ಭೂಮಿಯನ್ನು ನಿಗಡಿ ಮಾಡಿಕೊಟ್ಟು ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡುವಂತೆ ವ್ಯವಸ್ಥೆ ಮಾಡಿದ್ದರು. ಆದರೆ ಈಗ ಅನ್ಯ ಸಮಾಜದ ಮುಖಂಡರು ಈ ನಿಗದಿತ ಜಾಗೆಯನ್ನು ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಸರಕಾರಿ ನಿಯಮಗಳ ಪ್ರಕಾರ ನಮ್ಮ ಸಮುದಾಯದವರಿಗೆ ಶೇ25ರಷ್ಟು ಸ್ಮಶಾನ ಭೂಮಿಯನ್ನು ಒದಗಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರು, ಸ್ವಾತಂತ್ರ್ಯ ಸಿಕ್ಕಾಗಿನಿಂದ ನಿಲಜಿ ಗ್ರಾಮದಲ್ಲಿ ನಮ್ಮ ಸಮುದಾಯಕ್ಕೆ ಶವ ಸಂಸ್ಕಾರ ಮಾಡಲು ಭೂಮಿಯಿಲ್ಲ. ಇನ್ನು ಈ ವಿಚಾರವಾಗಿ ತಹಶೀಲ್ದಾರರಿಗೆ ಮನವಿ ಮಾಡಿದಾಗ ನಮಗೆ ಒಂದುವರೆ ಗುಂಟೆಯಷ್ಟು ಜಮೀನು ನೀಡದ್ದರು. ಆದರೆ ಈಗ ನಾವು ಸ್ಮಶಾನ ಭೂಮಿಯನ್ನು ಅಭಿವೃದ್ಧಿ ಪಡಿಸಲು ಮುಂದಾದಾಗ ಅನ್ಯ ಸಮಾಜದವರು ಅದನ್ನು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ ಸರಕಾರ ನಿಯಮಾವಳಿಗಳ ಪ್ರಕಾರ ನಮಗೆ ಬರಬೇಕಾದ ಶೇ25ರಷ್ಟು ಭೂಮಿಯನ್ನು ಕೊಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹಾದೇವ್ ತಳವಾರ್, ದೀಪಕ್ ಕೇತ್‍ಕರ್, ಕಲ್ಲಪ್ಪ ಕೋಲಕಾರ್, ಸುನೀಲ್ ಕೋಲೆಕರ್, ಹರೀಶ್ ನಿಲಜಗಿ, ಪರಶುರಾಮ ಕೋಲಕಾರ್, ಮಹೇಶ್ ನಿಲಜಕರ್, ಅಕ್ಷಯ್ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.

 

Tags:

error: Content is protected !!