ಬೆಳಗಾವಿ ನಗರದಲ್ಲಿ ಎಪಿಎಂಸಿ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಗೆ ಸೆಡ್ಡು ಹೊಡೆದು ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣ ವಿಚಾರ ಕುರಿತಂತೆ ಎಪಿಎಂಸಿಯಲ್ಲಿ ನಡೆದ ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಡಾ.ಕೆ.ಕೊಡಿಗೌಡಗೆ ರೈತರು ಹಾಗೂ ವ್ಯಾಪಾರಸ್ಥರು ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಳಗಾವಿ ನಗರದಲ್ಲಿ ಸರಕಾರಿ ಎಪಿಎಂಸಿ ಮಾರುಕಟ್ಟೆ ಸರಿಯಾಗಿಯೇ ಕರ್ಯ ನಿರ್ವಸುತ್ತಿದೆ. ಆದರೂ ಕೂಡ ಸರಕಾರಿ ಎಪಿಎಂಸಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಖಾಸಗಿ ತರಕಾರಿ ಮರುಕಟ್ಟೆ ತಲೆ ಎತ್ತಿ ನಿಂತಿದೆ. ಈ ಕುರಿತಂತೆ ರೈತರು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಸರಕಾರಿ ಎಪಿಎಂಸಿ ಅಧಿಕಾರಿಗಳುನ್ನು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ತೀವೃ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಕುರಿತಂತೆ ಇಂದು ಬೆಳಗಾವಿಯ ಸರಕಾರಿ ಎಪಿಎಂಸಿ ಸಭಾಂಗಣದಲ್ಲಿ ಖಾಸಗಿ ಜೈ ಕಿಸಾನ್ ವೋಲ್‍ಸೇಲ್ ತರಕಾರಿ ಮಾರುಕಟ್ಟೆ ಸ್ಥಾಪನೆಗೆ ಅನಧಿಕೃತ ಲೈಸೆನ್ಸ್ ನೀಡಿದ ಕುರಿತಂತೆ ಚರ್ಚೆ ನಡೆಸಲು ಇಂದು ಬೆಳಗಾವಿ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಎಪಿಎಂಸಿ ಸರ್ಕಾರಿ ಕಾರ್ಯದರ್ಶಿ ಡಾ.ಕೆ.ಕೊಡಿಗೌಡ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಸಭೆಯಲ್ಲಿ ಅನಧಿಕೃತವಾಗಿ ಖಾಸಗಿ ತರಕಾರಿ ಮಾರುಕಟ್ಟೆಗೆ ಅನುಮತಿ ನೀಡಿದ ಕುರಿತಂತೆ ರೈತರು ಹಾಗೂ ಸರಕಾರಿ ಎಪಿಎಂಸಿ ವ್ಯಾಪಾರಸ್ಥರು ಡಾ.ಕೆ.ಕೊಡಿಗೌಡ ರವರನ್ನು ತೀವೃ ತರಾಟೆಗೆ ತೆಗೆದುಕೊಂಡರು. ಈ ವೇಳೆ ಸಭೆಯಲ್ಲಿ ಗದ್ದಲ ಉಂಟಾಯಿತು.
ಈ ವೇಳೆ ಅನಧಿಕೃತವಾಗಿ ಹಣ ಪಡೆದು ಖಾಸಗಿ ಮಾರುಕಟ್ಟೆಗೆ ಲೈಸೆನ್ಸ್ ನೀಡಿದ್ದಾರೆಂದು ರೈತರು ಹಾಗೂ ಸರಕಾರಿ ಎಪಿಎಂಸಿ ವ್ಯಾಪಾರಸ್ಥರು ಆರೋಪ ಡಾ. ಕೊಡಿಗೌಡ ಮೇಲೆ ಆರೋಪ ಮಡಿದರು. ಲಕ್ಷಾಂತರ ರೂಪಾಯಿ ಹಣ ನೀಡಿ ಎಪಿಎಂಸಿಯಲ್ಲಿ ಮಳಿಗೆ ಖರೀದಿಸಿದ್ದೇವೆ. ಮಳಿಗೆಗಳನ್ನು ವಾಪಸ್ ಪಡೆದು ಹಣ ಹಿಂದಿರುಗಿಸಿ ಅಂತಾ ಸರಕಾರಿ ಎಪಿಎಂಸಿ ವ್ಯಾಪಾರಸ್ಥರು ಡಾ. ಕೋಡಿಗೌಡರವರನ್ನು ಒತ್ತಾಯ ಮಾಡಿದರು. ಜೈ ಕಿಸಾನ್ ತರಕಾರಿ ಮಾರುಕಟ್ಟೆ ಸ್ಥಾಪನೆ ಬಳಿಕ ಒಮ್ಮೆಯೂ ಎಪಿಎಂಸಿ ತರಕಾರಿ ಮಾರ್ಕೆಟ್‍ಗೆ ಭೇಟಿ ನೀಡಿಲ್ಲ ಎಂದು ಎಪಿಎಂಸಿ ಸರ್ಕಾರಿ ಕಾರ್ಯದರ್ಶಿ ಡಾ.ಕೆ.ಕೋಡಿಗೌಡಗೆ ಗೇರಾವ್ ಹಾಕಿ ತೀವ್ರ ಆಕ್ರೋಶ ಹೊರಹಾಕಿದರು.
ಈ ವೇಳೆ ಸರಕರಿ ಎಪಿಎಂಸಿ ಅಧ್ಯಕ್ಷರಾದ ಯುವರಾಜ ಕದಂ ಹಾಗೂ ಸದಸ್ಯರು ಖಾಸಗಿ ಮಾರ್ಕೆಟ್‍ಗೆ ಲೈಸೆನ್ಸ್ ನೀಡದಂತೆ ಎರಡು ಬಾರಿ ಠರಾವು ಮಾಡಿದ್ದೆವು. ಈ ಖಾಸಗಿ ಮಾರ್ಕೆಟ್ ಸ್ಥಾಪನೆಯಾದ್ರೆ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತೆ ಅಂತಾ ತಿಳಿಸಿದ್ದೇವೆ. ಸಚಿವರಿಗೂ ಮನವಿ ಮಾಡಿದ್ರೂ ಸಹ ಖಾಸಗಿ ಮಾರ್ಕೆಟ್‍ಗೆ ಲೈಸೆನ್ಸ್ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಸಿದ್ದಗೌಡ ಮೋದಗಿ ಮಾತನಾಡಿ, ಡಾ. ಕೊಡಿಗೌಡರವರನ್ನು ತೀವೃ ತರಾಟೆಗೆ ತೆಗೆದುಕೊಂಡರು. ಲೈಸೆನ್ಸ್ ನೀಡುವ ವೇಳೆಯೇ ಇದರಲ್ಲಿ ಅನ್ಯಾಯವಾಗಿದೆ ಎಂದು ಹೇಳಿದ್ದೆವು. ಆದರೂ ಕೂಡ ಲೈಸೆನ್ಸ್ ನೀಡಿದ್ದೀರಿ. ಇನ್ನು ಪುಕ್ಕಟೆ ಸಂಬಳ ತಿನ್ನಲು ಬಂದಿದ್ದೀರಾ. ತಿಂಗಳು 50ಸಾವಿರ ರೂಪಾಯಿ ಸಂಬಳ ಎಣಿಸುವ ನೀವು ರೈತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.
ಇನ್ನು ಇಷ್ಟೆಲ್ಲ ನಡೆಯುತ್ತಿದ್ದರು ಯಾವುದಕ್ಕೂ ತಲೆ ಕೆಡೆಸಿಕೊಳ್ಳದ ಕಾರ್ಯದರ್ಶಿಗಳು ಫೋನ್‍ನಲ್ಲಿ ಯಾರಿಗೋ ಮೆಸೇಜ್ ಮಡುತ್ತದ್ದರು. ಇನ್ನು ಇಲ್ಲಿ ರೈತರು ಹಾಗೂ ಎಪಿಎಂಸಿ ವ್ಯಾಪಾರಸ್ಥರು ಬಂದು ಹಣವನ್ನು ಮರಳಿ ಕೊಡುವಂತೆ ಒತ್ತಾಯ ಮಾಡುತ್ತಿದ್ದಾರೆಂದು ಮೆಸೇಜ್ ಮಡುತ್ತಿದ್ದುದು ಈ ವೇಳೆ ಕಂಡುಬಂತು,
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಅಧಿಕಾರಿಗಳು, ಇದು ಕೆಪಿಎಂಆರ್ ಕಾಯ್ದೆಯ ಅಡಿಯಲ್ಲಿ ಬರುತ್ತದೆ. ಖಾಸಗಿ ಮಾರುಕಟ್ಟೆಗೆ ಅನುಮತಿ ನೀಡುವುದು ಕಾರ್ಯ ದರ್ಶಿ ಅಥವಾ ಉಪನಿರ್ದೇಶಕರ ವ್ಯಾಪ್ತಿಗೂ ಬರುವುದಿಲ್ಲ. ಅದು ನೇರವಾಗಿ ಸರಕಾರದ ಮಾನ್ಯ ನಿರ್ದೇಶಕರ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸರಕಾರದ ಕಾನೂನು ನಿಯಮಗಳ ಅನ್ವಯ ಅವರಿಗೆ ಅನುಮತಿಯನ್ನು ನೀಡಲಾಗಿದೆ ಎಂದರು.
ಇನ್ನು ಬಳಿಕ ಸರಕಾರಿ ಎಪಿಎಂಸಿ ವ್ಯಾಪಾರಸ್ಥರಿಗೆ ಹಣವನ್ನು ಮರಳಿ ಕೊಡುವ ಕುರಿತು ಮಾಧ್ಯಮಗಳಿಗೆ ಉತ್ತರಿಸಿದ ಡಾ. ಕೋಡಿಗೌಡ, ಹಣವನ್ನು ಹಿಂದಿರುಗಿಸುವ ಕುರಿತು ಇಲಾಖೆಯ ನಿಯಮಗಳನ್ನು ನೋಡಬೇಕು. ಇನ್ನು ನಮ್ಮ ಉದ್ದೇಶ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಎರಡೂ ಮಾರುಕಟ್ಟೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು.
ಇನ್ನು ಬೆಳಗಾವಿ ನಗರದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡುವಂತೆ ಹೇಳಿದ್ದಾರೆ. ಇನ್ನು ಮುಂದೆ ಏನಗಲಿದೆ ಎಂದು ಕಾದು ನೋಡಬೇಕಿದೆ.