Vijaypura

ಸಮವಸ್ತ್ರಕ್ಕೆ ಒಲವು ತೋರಿದ ಹರಿಹರ ವಚನಾನಂದ ಶ್ರೀಗಳು: ಸರಕಾರದ ಕಾರ್ಯಕ್ಕೆ ಪ್ರಶಂಸೆ

Share

ಹಿಜಾಬ್-ಕೇಸರಿ ಶಾಲು ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಬೃಹನ್ಮಠದಲ್ಲಿ ವಚನಾನಂದ ಸ್ವಾಮೀಜಿಯವರು ಪ್ರತಿಕ್ರಿಯಿಸಿ ಪರೋಕ್ಷವಾಗಿ ಹಿಜಾಬ್ ವಿರೋಧಿಸಿ ಸಮವಸ್ತ್ರಕ್ಕೆ ಒಲವು ತೋರಿದರು. ಸರ್ಕಾರ ಮೂರು ದಿನ ಶಾಲಾ ಕಾಲೇಜಿಗೆ ರಜೆ ಘೋಷಿಸಿದೆ, ಎರಡ್ಮೂರು ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ,

ಮೊದಲಿನಿಂದಲೂ ಶಾಲೆಯಲ್ಲಿ ಒಂದೇ ಸಮವಸ್ತ್ರ ಇತ್ತು, ವಸ್ತ್ರ ಬೇರೆ ಸಮವಸ್ತ್ರ ಅಲ್ಲಿ ಎಲ್ಲರೂ ಸಮಾನರು, ಆ ಜಾತಿ,ಈ ಧರ್ಮ ಬಡವ ಶ್ರೀಮಂತ ಅಲ್ಲಿ ಇರೋಲ್ಲ, ಅಲ್ಲಿ ಇರೋದು ಶಿಕ್ಷಣ ಧರ್ಮ ಎಂದು ಮಾರ್ಮಿಕವಾಗಿ ನುಡಿದರು. ಕಲಿಯುವ ಶಿಕ್ಷಣವೂ ಒಂದೇ, ಶಿಕ್ಷಕರು ಒಂದೇ, ಶಾಲೆಗೆ ಹೋಗುವುದು ಶಿಕ್ಷಣ, ಸಂಸ್ಕಾರ ಕಲಿಯಲಿಕ್ಕೆ, ಕರ್ನಾಟಕ ರಾಜ್ಯ ಭಾವೈಕ್ಯತೆ ರಾಜ್ಯ, ಇಲ್ಲಿ ಇಂತಹ ಘಟನೆಯನ್ನು ತೀವ್ರವಾಗಿ ಖಂಡಿಸ್ತೇನೆ ಎಂದರು. ಈ ಸಮಸ್ಯೆ ಸಡನ್ ಆಗಿ ಈಗೇಕೆ ಬಂತು ಎಂದು ಪ್ರಶ್ನಿಸಿ ಇದ್ರ ಹಿಂದೆ ಬೇರೆ ಬೇರೆ ಕಾರಣಗಳಿರುತ್ತವೆ, ಈಗಾಗಲೇ ಕೋವಿ ಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ, ಈಗ ಸರ್ಕಾರ ಮಕ್ಕಳು ಸುಶಿಕ್ಷಿತ ಪಡೆಯೋ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಿಜಾಬ್ ಹಾಕಿಕೊಳ್ಳೋದು ನಮ್ಮ ಧಾರ್ಮಿಕ ಹಕ್ಕು ವಿಚಾರಕ್ಕೆ ಪ್ರತಿಕ್ರಿಯಿಸಿ ಅವರವರ ಭಾವನೆಯನ್ನು ಹೇಳೋಕೆ ಮುಕ್ತ ಅವಕಾಶ ಇದೆ.. ಅದನ್ನು ಶಾಲೆಯ ಹೊರಗಡೆ ಹೇಳಲಿ ಶಾಲೆಯೊಳಗೆ ಶಿಕ್ಷಣ ಕಲಿಯೋಕೆ ಬಂದಿವಿ, ಎಂದರು. ಹಿಂದೆ ನಾವು ಕಲಿಯೋವಾಗ ರೀತಿ ಇರಲಿಲ್ಲ, ಉತ್ತರ ಕರ್ನಾಟಕ ದಲ್ಲಂತೂ ಇರಲಿಲ್ಲ, ಮುಸ್ಲಿಮರು ಹಿಂದೂಗಳು ಭಾವೈಕ್ಯತೆಯಿಂದ ಇದ್ರು, ಈಗ ಎಲ್ಲಿಂದ ಬಂತು ಗೊತ್ತಿಲ್ಲ, ನಿಮಗಿಂತ ನಾವೇನು ಅಂತ ಶುರುವಾಗಿದೆ, ಈ ಸ್ಪರ್ಧೆ ಒಳ್ಳೆಯದಲ್ಲ ಎಂದರು.‌ ನೀವು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮಾಡಿ, ಕರ್ನಾಟಕವನ್ನು ನಂಬರ್ ಒನ್ ಮಾಡೋದ್ರಲ್ಲಿ ಸ್ಪರ್ಧೆ ಮಾಡಿ, ಕರ್ನಾಟಕದ ಮಕ್ಕಳು ಐಎಎಸ್ ನಲ್ಲಿ ರ್ಯಾಂಕ್ ಬರಬೇಕು, ನೀವು ಸ್ಪರ್ಧೆ ಮಾಡೋದಾದ್ರೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳಿ, ಬಟ್ಟೆಯಿಂದ ಏನು ಆಗೋದಿಲ್, ಬಟ್ಟೆ ಎಷ್ಟು ಮುಖ್ಯವೋ,ನಾವು ನಡೆಯುವಂತಹ ದಾರಿ ಮುಖ್ಯ ಎಂದರು. ಅದಕ್ಕೆ ಸಮವಸ್ತ್ರವಿರ ಬೇಕು ಎಲ್ಲರೂ ಒಂದೇ ಹಿಜಾಬ್-ಕೇಸರಿ,ನೀಲಿ ಶಾಲು ತಿಕ್ಕಾಟ ವಿಚಾರಕ್ಕೆ ಉತ್ತರಿಸಿ ನಾವು ನಮ್ಮ ಧರ್ಮವನ್ನು ಮಠ, ಚರ್ಚ್,ಮಸೀದಿಯಲ್ಲಿ ಇಟ್ಟುಕೊಳ್ಳಬೇಕು… ಶಾಲೆಗೆ ಹೋದಾಗ ಶಿಕ್ಷಣವೇ ಧರ್ಮ,ತಂದೆ,ತಾಯಿ ಅನ್ನೋ ಭಾವವಿರಬೇಕು, ಧರ್ಮ ತಿಳಿದುಕೊಳ್ಳೋಕೆ ಆಶ್ರಮ, ಮಂದಿರ,ಮಠ,ಚರ್ಚ್, ಮಸೀದಿಗಳಿವೆ, ಅಲ್ಲಿಗೆ ಹೋಗಿ ಧರ್ಮದ ವಿಚಾರ ಕಲಿಯಿರಿ, ಶಾಲೆಯಲ್ಲಿ ಏನು ಕಲಿಯಬೇಕು, ಅಲ್ಲಿರೋ ಪಠ್ಯಕ್ರಮ ಕಲಿಯಬೇಕು,

ಸರ್ಕಾರ ನಿಗದಿಪಡಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮ ಕಲಿಯಬೇಕು, ಅದನ್ನೇ ಕಲಿಯಬೇಕು ಬೇರೆ ಬೇರೆ ಕಲಿಯಬಾರದು ಎಂದರು. ಹಿಜಾಬ್-ಕೇಸರಿ ವಿವಾದ ಸರ್ಕಾರ ಸೂಕ್ತವಾಗಿ ನಿಭಾಯಿಸ್ತಿದ್ಯಾ ಅನ್ನೋ ವಿಚಾರಕ್ಕೆ ಸರ್ಕಾರ ತುಂಬಾ ಚೆನ್ನಾಗಿ ಹ್ಯಾಂಡ್ಲ್ ಮಾಡಿದೆ, ಈಗ ಸ್ವಲ್ಪ ಗೊತ್ತಾದ ತಕ್ಷಣ ಮೂರು ದಿನ ರಜೆ ಕೊಟ್ಟಿದ್ದಾರೆ, ಯಾವುದೇ ಮಕ್ಕಳಿಗೆ ತೊಂದ್ರೆಯಾದ್ರೆ ಅದು ನಮ್ಮ ಮಗು ಅಲ್ವಾ ಎಂದು ಪ್ರಶ್ನಿಸಿ ಅದು ಕರ್ನಾಟಕದ ಮಗು, ನಿಮ್ಮ ರಕ್ತದ ಬಣ್ಣ ಕೆಂಪು,ನನ್ನಲ್ಲಿರೋ ರಕ್ತದ ಬಣ್ಣ ಕೆಂಪು, ಸರ್ಕಾರದ ಕ್ರಮಕ್ಕೆ ವಚನಾನಂದ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

Tags:

error: Content is protected !!