Belagavi

ಸತ್ತವನ ಹೆಸರಲ್ಲಿ ಕೋಟಿ ಕೋಟಿ ಪಂಗನಾಮ: ಬೆಳಗಾವಿಯಲ್ಲಿ ಮತ್ತೊಂದು ಮಹಾಮೋಸ..!

Share

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪತ್ತಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯಿಂದಲೇ 3.27 ಕೋಟಿ ರೂಪಾಯಿ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಹೌದು ಬೆಳಗಾವಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಇದ್ದರೂ ಸರಕಾರಕ್ಕೆ ಸೆಡ್ಡು ಹೊಡೆದು 2011ರಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 2014ರಲ್ಲಿ ಎನ್‍ಎ ಲೇಔಟ್ ಮಾಡಿಸಿಕೊಂಡು ಅಕ್ರಮವಾಗಿ ಜೈ ಕಿಸಾನ್ ಭಾಜಿ ಮಾರ್ಕೆಟ್ ಪ್ರಕರಣ ಇನ್ನೂ ಜೀವಂತ ಇರುವಾಗಲೇ, ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಸಹಕಾರಿ ಸಂಘದ ಅಕ್ರಮ ಬೆಳಕಿಗೆ ಬಂದಿದ್ದು ಸತ್ತವನ ಹೆಸರಿನಲ್ಲಿ ಕೋಟ್ಯಂತರ ರೂ. ಪಂಗನಾಮ ಹಾಕಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪತ್ತಿನ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯಿಂದಲೇ 3.27ಕೋಟಿ ರೂಪಾಯಿ ದುರುಪಯೋಗ ಮಾಡಿಕೊಂಡಿರುವುದು ಬಯಲಿಗೆ ಬಂದಿದೆ.

ಮೃತ ವ್ಯಕ್ತಿಯ ಹೆಸರಿನಲ್ಲಿ ಒಂದಲ್ಲ, ಎರಡಲ್ಲ 30 ಸಾಲದ ಖಾತೆ ಸೃಷ್ಟಿಸಿ ವಂಚನೆ ಮಾಡಿದೆ. ಸಂಘದ ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಮಂದಿ ಮೇಲೆ ಈ ಕುರಿತು ಈಗಾಗಲೇ ಸಿಇಎನ್ ಪೆÇೀಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಲಿ ಸಂಘದ ಕಾರ್ಯದರ್ಶಿ ಸುರೇಶ್ ವಡ್ಡರ್ ಸಿಇಎನ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.

ಕಳೆದ ತಿಂಗಳು ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ನಾತಾಜಿ ಪಾಟೀಲ್ ಮೇಲೆ ಎಸಿಬಿ ದಾಳಿ ಬೆನ್ನಲ್ಲಿಯೇ ಇದೀಗ ನಾತಾಜೀ ಪಾಟೀಲ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. 2015 ಜೂನ್ 1ರಿಂದ 2020 ಅಕ್ಟೋಬರ್ 2018ರ ಅವಧಿಯಲ್ಲಿ ನಡೆದಿದ್ದ ಅವ್ಯವಹಾರ, ಸಹಕಾರಿ ಇಲಾಖೆಯ ಅಡಿಟ್ ಸಂದರ್ಭದಲ್ಲಿ ಸದಸ್ಯರಿಂದ ಸಂಗ್ರಹಿಸಿದ ಹಣ ಕಾನೂನು ಬಾಹಿರವಾಗಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದು ಹೀಗೆ.

ಒಟ್ಟಿನಲ್ಲಿ ಮಾಜಿ ಅಧ್ಯಕ್ಷ ನಾತಾಜಿ ಪಾಟೀಲ್ ಸೇರಿ 17 ಮಂದಿಗೆ ಬಂಧನ ಭೀತಿ ಎದುರಾಗಿದೆ. ಬೆಳಗಾವಿ ನಗರದಲ್ಲಿ ಅಕ್ರಮವಾಗಿ ಏನು ಬೇಕಾದರೂ ನಡೆಯುತ್ತೆ ಎನ್ನುವವರಿಗೆ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದು. ಈ ಪ್ರಕರಣ ಯಾವ ದಿಕ್ಕಿನ ಸಾಗುತ್ತದೆ ಎಂದು ಕಾದು ನೋಡಬೇಕಿದೆ.

Tags:

error: Content is protected !!