hubbali

ಸಕಲ ಸರ್ಕಾರಿ ಗೌರವಗಳೊಂದಿಗೆ ನಾಡೋಜ ಚನ್ಮವೀರ ಕಣವಿ‌ ಅಂತ್ಯಕ್ರಿಯೆ: ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ

Share

ಕಳೆದೊಂದು ತಿಂಗಳಿನಿಂದ ಆನಾರೋಗ್ಯ ಕಾರಣದಿಂದಾಗಿ ನಗರದ ಎಸ್ ಡಿ ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಡೋಜ ಚನ್ನವೀರ ಕಣವಿಯವರು ಇಂದು ವಿಧಿವಶರಾಗಿದ್ದಾರೆ. ಇಂದು ಸಂಜೆ 5 ಗಂಟೆಯ ನಂತರ ಸಲಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೇರವೇರಿಸಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾಹಿತಿ ನೀಡಿದರು.

ನಗರದ ಎಸ್ ಡಿ ಎಂ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಅಂತಿಮ ವಿಧಿ ವಿಧಾನ ಕಾರ್ಯಗಳ ಕುರಿತು ಚರ್ಚೆ ಮಾಡಿದ ಬಳಿಕ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಕಣವಿಯವರ ಪಾರ್ಥಿವ ಶರೀರವನ್ನು ಆಸ್ಒತ್ರೆಯಿಂದ ನೇರವಾಗಿ ಕಲ್ಯಾಣಗರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಮನೆಯಲ್ಲಿ ಅಂತಿಮ ಪೂಜೆ ಪುರಸ್ಕಾರ ನಂತರ, ಕರ್ನಾಟಕ ಕಾಲೇಜು ಮೈದಾನಕ್ಕೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. 1 ಗಂಟೆಯಿಂದ 5 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಸಮಯ ನೀಡಲಾಗಿದ್ದು, ಸಾರ್ವಜನಿಕರು ಶಾಂತಿ,ತಾಳ್ಮೆಯಿಂದ ಆಗಮಿಸಿ ದರ್ಶನ ಪಡೆದುಕೊಳ್ಳಬೇಕು ಎಂದರು.

ಮುಗದ ಗ್ರಾಮದ ಸೃಷ್ಠಿ ಪಾರ್ಮ್ ಹೌಸನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.

ಈಗಾಗಲೇ ಕುಟುಂಬಸ್ಥರೊಂದಿಗೆ ಅಂತ್ಯಕ್ರೆಯೆ ಕುರಿತು ಚರ್ಚೆ ನಡೆಸಲಾಗಿದ್ದು, ಮುಗದ ಗ್ರಾಮದ ಕಣವಿ ಕುಟುಂಬದ ಸೃಷ್ಠಿ ಫಾರ್ಮ್ ಹೌಸ‌ನಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ. ಸಂಜೆ 5 ಗಂಟೆಯ ನಂತರ ಪಾರ್ಥಿವ ಶರೀರವನ್ನು ಮುಗದ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಅಲ್ಲಿಯೇ ಚನ್ಮವೀರ ಕಣವಿಯವರ ಪತ್ನಿ‌ಯವರ ಸಮಾಧಿ ಪಕ್ಕದಲ್ಲಿ ಅಂತ್ಯೆಕ್ರಿಗೆ ತೀರ್ಮಾಣ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.

ಕೆಸಿಡಿ ಕಾಲೇಜು ಮೈದಾನಕ್ಕೆ ಹು-ಧಾ ನಗರ ಪೊಲೀಸ ಆಯುಕ್ತ ಲಾಬೂರಾಮ್ ಹಾಗೂ ಎಸಿಪಿ‌ ಅನುಷಾ ಭೇಟಿ.

ಧಾರವಾಡ ನಗರದ ಕರ್ನಾಟಕ‌ ಕಾಲೇಜು ಮೈದಾನದಲ್ಲಿ 1 ಗಂಟೆಗೆ ನಂತರ ನಾಡೋಜ ಚನ್ಮವೀರ ಕಣವಿಯವರ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ, ಧಾರವಾಡ ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೆಸಿಎಇ ಕಾಲೇಜು ಮೈದಾನಕ್ಕೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ ಆಯುಕ್ತರಾದ ಲಾಬೂರಾಮ್ ಹಾಗೂ ಧಾರವಾಡ ಎಸಿಪಿ‌ಅನುಷಾ ಅವರು ಭೇಟಿ ನೀಡಿ ಪೊಲೀಸ್ ಭದ್ರತೆಯನ್ನು ಪರಿಶೀಲನೆ ನಡರಸಿದರು.

Tags:

error: Content is protected !!