ಸಂತ ಶ್ರೀ ಜಲಾರಾಮ್ ಫೌಂಡೇಶನ್ ವತಿಯಿಂದ ಬೆಳಗಾವಿಯ ಬಿಮ್ಸ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಸ್ವೇಟರ್ ಮತ್ತು ಹೊದಿಕೆಗಳನ್ನು ವಿತರಿಸಲಾಯಿತು.

: ಶನಿವಾರ ಬೆಳಗಾವಿಯ ಬಿಮ್ಸ ಆಸ್ಪತ್ರೆಯ ಉಸಿರಾಟ ವಿಭಾಗಕ್ಕೆ ಆಗಮಿಸಿದ ಸಂತ ಶ್ರೀ ಜಲಾರಾಮ್ ಫೌಂಡೇಶನ್ ಪದಾಧಿಕಾರಿಗಳು 22 ಅಸ್ವಸ್ಥ ವೃದ್ಧರಿಗೆ ಹಣ್ಣು, ಬಿಸ್ಕತ್ ಮತ್ತು ಸಿಹಿತಿಂಡಿಗಳೊಂದಿಗೆ ಸ್ವೇಟರ್ ಮತ್ತು ಹೊದಿಕೆಗಳನ್ನು ವಿತರಿಸಿದರು. ಗುಜರಾತಿನ ವೀರಪುರದಲ್ಲಿ ನಡೆಯುತ್ತಿರುವ ಅನ್ನದಾನ ಸೇವೆಯು 202 ವರ್ಷಗಳನ್ನು ಪೂರೈಸಿದ್ದು,
ಇಂದು ಸಂತ ಶ್ರೀ ಜಲರಾಮ್ ಬಾಪಾ ಅವರ ಪತ್ನಿ ವೀರಬಾಯಿ ಮಾತಾ ಅವರ ಪುಣ್ಯಸ್ಮರಣೆಯ ನೆನಪಿಗಾಗಿ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಖನ್ನೂಭಾಯಿ ಠಕ್ಕರ್, ಬಿಪಿನ್‍ಭಾಯಿ ಸೋಮಯ್ಯಾ, ಕಿರಣ್ ಭಾಯಿ ಮೆಹ್ತಾ, ದೇವೇಂದ್ರಭಾಯಿ ಗುಜರಾತಿ, ಅಮಿತ್ ಭಾಯಿ ಠಕ್ಕರ್, ಲಲಿತಭಾಯಿ ಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.