ಬೆಳಗಾವಿ ಜಿಲ್ಲೆಯ ಕಿತ್ತೂರು ಸಂಸ್ಥಾನದ ಐತಿಹಾಸಿಕ ಹೋರಾಟದಲ್ಲಿ ಮೂಂಚುಣಿಯಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಶೂರತೆಯ ಕಥೆ ಸಾರುವ ಚಲನಚಿತ್ರದಲ್ಲಿ ಭಾರತ ರತ್ನ ಲತಾ ಮಂಗೇಶ್ಕರ್ ಅವರು ಕನ್ನಡಲ್ಲಿಯೂ ೨ ಗೀತೆಗಳನ್ನ ತಮ್ಮ ಮಧುರ ಕಂಠಸಿರಿಯಲ್ಲಿ ಹಾಡಿ ಕನ್ನಡ ಚಿತ್ರರಂಗಕ್ಕೆ ತಮ್ಮ ಅಭೂತಪೂರ್ವ ಗಾಯ ಮಾಧುರ್ಯವನ್ನ ನೀಡಿದ್ದಾರೆ.

ಭಾರತ ರತ್ನ ಲತಾ ಮಂಗೇಶ್ಕರ್ ಅವರನ್ನ ಸಾಕ್ಷಾತ್ ಸರಸ್ವತಿ ಅವತಾರವೆಂದೇ ಕರೆಯಲಾಗುತ್ತಿತ್ತು. ಮೂಲತಃ ಮರಾಠಿ ಭಾಷಿಕರಾದರು ಇವರು ಅನೇಕ ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನ ಹಾಡಿದ್ದಾರೆ. ಇವರ ಸುಮಧುರ ಕಂಠಸಿರಿಯಲ್ಲಿ ಕನ್ನಡದಲ್ಲಿಯೂ ಒಂದು ಗೀತೆ ಮೂಡಿಬಂದಿದೆ. ೧೯೬೭ರಲ್ಲಿ ಕನ್ನಡ ಚಲನಚಿತ್ರ ಸಂಸ್ಥೆಯಲ್ಲಿ ಒಂದು ಐತಿಹಾಸಿಕ ಚಿತ್ರ ಮೂಡಿ ಬಂತು. ಅದು ನಮ್ಮ ಬೆಳಗಾವಿ ಜಿಲ್ಲೆಗೆ ಸಂಬAಧಿಸಿದ ಸ್ವಾತಂತ್ರö್ಯ ಹೋರಾಟದ ಐತಿಹಾಸಿಕ ಸಿನಿಮಾ. ೧೯೬೭ ರಲ್ಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನ ನಿರ್ಮಿಸಿ, ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಕನ್ನಡಕ್ಕೆ ಮೊದಲ ಬಾರಿಗೆ ಲತಾ ಮಂಗೇಶ್ಕರ್, ಅವರ ಸಹೋದರಿಯರಾದ ಆಶಾ ಭೋಸ್ಲೆ, ಉಷಾ ಮಂಗೇಶ್ಕರ್ ಮತ್ತು ಹಿಂದಿಯ ಖ್ಯಾತ ಗೀತಕಾರ ಮತ್ತು ಗಾಯಕ ಮನ್ನಾಡೆ ಮುಂತಾದವರನ್ನು ಕರೆ ತಂದರು.
ಸAಗೋಳ್ಳಿ ರಾಯಣ್ಣ ಚಿತ್ರದಲ್ಲಿ ಒಟ್ಟು ೭ ಗೀತೆಗಳಿವೆ. ಅದರಲ್ಲಿ,
ಬೆಳ್ಳನೆ ಬೆಳಗಾಯಿತು
https://www.youtube.com/watch?v=ZRal9Mdq0Jw

ಮತ್ತು “ಎಲ್ಲಾರೆ ಇರತೀರೋ ಎಂದಾರೆ ಬರತೀರೋ”
https://www.youtube.com/watch?v=EUEyo4BPbUQ
ಎಂಬ ಗೀತೆಗಳ ಸಾಹಿತ್ಯವನ್ನ ಭುಜಂಗ ಮಹಿಷವಾಡಿ ರಚಿಸಿ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರಿಂದಲೇ ಹಾಡಿಸಿದರು. ಇನ್ನು ಸಹೋದರಿ ಆಶಾ ಭೊಸಲೇ ಅವರು “ಯಾಕೋ ಏನೋ ಸೆರಗು ನಿಲ್ಲವಲ್ದು”, ಸಹೋದರಿ ಉಷಾ ಮಂಗೇಶ್ಕರ್ ಅವರು
“ಯಾರಿವ ನನ್ ಮನ ಮರುಳಾಗಿಸಿದವ
https://www.youtube.com/watch?v=OfOsyfnKToA
ಈ ಗೀತೆಗಳನ್ನ ತಮ್ಮ ಮಧುರ ಕಂಠಸಿರಿಯಲ್ಲಿ ಹಾಡಿದ್ದಾರೆ. ಅದರಂತೆ ಮನ್ನಾಡೆಯವರು “ನೀರೆ ನೀನು ಬಾರೆ ಬೇಗ” , “ಜಗವಿದು ಸೋಜಿಗ” ಮತ್ತು “ಗುರುಸ್ಮರಣೆಯ ಮಾಡು”
https://www.youtube.com/watch?v=htPSjRAPgT8
ಎಂಬ ಗೀತೆಯನ್ನ ಹಾಡಿದ್ದಾರೆ.