Hukkeri

ಸಂಕೇಶ್ವರದಲ್ಲಿ ಸಿನಿಮೀಯ ರೀತಿ ಸಿರಿಯಲ್ ಕಳ್ಳತನ…

Share

ರಾತ್ರಿ ವೇಳೆ ಮನೆಗೆ ನುಗ್ಗಿ ಸಿನಿಮೀಯ ರೀತಿಯಲ್ಲಿ ಸಿರಿಯಲ್ ಕಳ್ಳತನ ಮಾಡಿದ ಘಟನೆ ಸಂಕೇಶ್ವರದಲ್ಲಿ ನಡೆದಿದೆ.

ಎಂಟರಿAದ ಹತ್ತು ಜನರಿದ್ದ ಡಕಾಯಿತರ ತಂಡ ಏಕಾಏಕಿ ಸಂಕೇಶ್ವರದ ಹೊರ ವಲಯದಲ್ಲಿರುವ ರಾಮ ಕಿಲ್ಲೆದಾರ ಮತ್ತು ಅವರ ಸಂಬAಧಿ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಮೂವರು ಸದಸ್ಯರನ್ನ ಕಟ್ಟಿ ಹಾಕಿ ಯಾರು ಕೂಗಾಡಬಾರದೆಮದು ಚಾಕು ತೋರಿಸಿ, ಎರಡು ಮನೆಗಳಿಂದ ೧೪೦ಗ್ರಾಂ ಚಿನ್ನಭರಣ ಹಾಗೂ
೭೫,೦೦೦ರೂಪಾಯಿ ಎಗರಿಸಿ ದರೋಡೆಕೋರರು ಪರಾರಿಯಾಗಿದ್ದಾರೆ. ದರೋಡೆಕೋರರು ತಮ್ಮ ಗುರುತು ಸಿಗಬಾರದೆಂದು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಘಟನಾ ಸ್ಥಳಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Tags:

error: Content is protected !!