ಬೆಳಗಾವಿಯ ಶ್ರೀ ಸಮಾದೇವಿ ಜನ್ಮೋತ್ಸವ ನಿಮಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿದವು.

ನಗರದ ಸಮಾದೇವಿ ಗಲ್ಲಿಯಲ್ಲಿರುವ ಶ್ರೀ ಸಮಾದೇವಿ ಸಂಸ್ಥಾನ ಹಾಗೂ ವೈಶ್ಯವಾಣಿ ಸಮಾಜದ ವತಿಯಿಂದ ಫೆ.12ರಿಂದ ಸಮಾದೇವಿ ಜನ್ಮೋತ್ಸವ ನಿಮಿತ್ಯ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಸೋಮವಾರ ಮೂರನೇ ದಿನ ದೇವಿಯ ಕಾಕಡಾರತಿ, ಅಭಿಷೇಕ, ಉಡಿ ತುಂಬುವುದು ಹಾಗೂ ಸಾಯಂಕಾಲ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಮೆರವಣಿಗೆಯು ಸಮಾದೇವಿ ಗಲ್ಲಿಯಿಂದ ಆರಂಭವಾಗಿ ಗೋಂಧಳಿ ಗಲ್ಲಿ, ಗೌಳಿ ಗಲ್ಲಿ, ನಾರ್ವೆಕರ್ ಗಲ್ಲಿ ಮಾರ್ಗವಾಗಿ ಸಮಾದೇವಿ ಮಂದಿರಕ್ಕೆ ಆಗಮಿಸಿ ಅಂತ್ಯವಾಯಿತು.
ಮೆರವಣಿಗೆಯುದ್ಧಕ್ಕೂ ಭಕ್ತರು ಪಾಲಿಕೆ ಮುಂದೆ ನೀರು ಹಾಕಿ, ದೇವಿಗೆ ಆರತಿ ಮಾಡಿ ಪೂಜೆ ಸಲ್ಲಿಸಿದರು. ಇನ್ನು ಇದೇ ವೇಳೆ ಆಕರ್ಷಕ ಜಾಂಝ್ ಪಥಕ್ ಮೆರವಣಿಗೆ ಮತ್ತಷ್ಟು ಮೆರಗು ತಂದು ಕೊಟ್ಟಿತ್ತು.
ಅದೇ ರೀತಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸಂಜೆ ಬಹುಮಾನ ವಿತರಿಸಲಾಯಿತು. ಮಂಗಳವಾರ ಮಂದಿರದಲ್ಲಿ ಮಹಾಪ್ರಸಾದ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲ ಭಕ್ತಾದಿಗಳು ಆಗಮಿಸಿ ದೇವಿಯ ದರ್ಶನ ಪಡೆದುಕೊಂಡು ಮಹಾಪ್ರಸಾದ ಸ್ವೀಕರಿಸಬೇಕು ಎಂದು ಮಂದಿರ ಕಮೀಟಿಯವರು ತಿಳಿಸಿದ್ದಾರೆ.