ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಸಾಂಸ್ಕøತಿಕ ಭವನದ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸಿ,ಎಂ ಬಸವರಾಜ್ ಬೊಮ್ಮಾಯಿ ನೆರವೆರಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ 2.50 ಕೋಟಿ ರೂ ವೆಚ್ಚದಲ್ಲಿ ಸಾಂಸ್ಕøತಿಕ ಭವನದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಸಿ,ಎಂ ಬೊಮ್ಮಾಯಿ ನೆರವೆರಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನಲ್ಲಿ ಅಹಂ ಎಂಬುದು ಅಡಿಯಿಂದ ಮುಡಿಯವರೆಗೆ ಅಹಂ ಎಂಬುದು ಇರುತ್ತದೆ. ನಮ್ಮ ಬಗ್ಗೆ ನಾವು ಸರಿಯಾಗಬ ತಿಳಿದುಕೊಂಡಿರುವುದಿಲ್ಲ. ನಮ್ಮ ಚಿಂತನೆಯ ಆಳ ನಮಗೆ ತಿಳಿದಿರುವುದಿಲ್ಲ ಹಾಗಾಗಿ ನಮ್ಮ ಬಗ್ಗೆ ನಾವು ತಿಳಿಯಬೇಕಾದರೆ ನಮಗೆ ಆಂತರಿಕ ಜ್ಞಾನ ಅತ್ಯವಶ್ಯ. ಇನ್ನು ಶಿಶುನಾಳ ಶರೀಫರ ಹಾಗೂ ಗುರುಗೋವಿಂದ ಭಟ್ಟರ ಗುರು ಶಿಶ್ಯರ ಸಂಬಂಧ ಕುರಿತಂತೆ ಮಾತನಾಡಿದರು. ಇನ್ನು ಸಂತ ಶಿಶುನಾಳ ಶರೀಫರು ಬದುಕಿನ ನಂತರವೂ ಬಾಳದವರು ಎಂದು ಆಧ್ಯಾತ್ಮದ ಹಿನ್ನೆಲೆಯಲ್ಲಿ ಮಾತನಾಡಿದರು.

ಈ ವೇಳೆ ಸಂತ ಶಿಶುನಾಳ ಶರೀಫರ ಸಾಹಿತ್ಯ ಹಾಗೂ ಹಾಡುಗಾರಿಕೆ ಕುರಿತಂತೆ ಮಾತನಾಡಿದ ಅವರು ಸಂತ ಶಿಶುನಾಳ ಶರೀಫರ ಆಧ್ಯಾತ್ಮಿಕ ಜ್ಞಾನದ ಆಳ ಕುರಿತಂತೆ ಮಾತನಾಡಿದರು. ತರವಲ್ಲ ತಂಗಿ ನಿನ್ನ ತಂಬೂರಿ ಸ್ವರ, ಬಿದ್ದುಯಬ್ಬೆ ಮುದಕಿ, ಕೋಡಗನ್ನ ಕೋಳಿ ನುಂಗಿತ್ತ ಎಂಬ ಅವರ ಹಾಡುಗಳನ್ನು ಕೇಳಿದಾಗ ಅವರ ಸಾಮಾಜಿಕ ಆಳವಾದ ಚಿಂತನೆ ಅರ್ಥವಾಗುತ್ತದೆ. ಕೇವಲ ಇಲ್ಲಿಗೆ ಬಂದು ದರ್ಶನ ತೆಗೆದುಕೊಂಡು ಹೋಗುವುದಲ್ಲ. ಇಲ್ಲಿಗೆ ಪ್ರವಾಸಿಗರು ಬಂದು ನಾಲ್ಕು ದಿನ ಇದ್ದು ಅದರ ಸಂಪೂರ್ಣ ತಿಳುವಳಿಕೆಯನ್ನು ಪಡೆಯುವಂತಾಗಬೇಕು. ಇನ್ನು ಈ ಜಾಗೆಯಲ್ಲಿ ಸಂತ ಶಿಶುನಾಳ ಶರೀಫರು ಹಾಗೂ ಗುರು ಗೋವಿಂದ ಭಟ್ಟರ ಜೀವನ ಸಾರ ತಿಳಿಸುವ ವಸ್ತು ಸಂಗ್ರಹಾಲಯವನ್ನು ಮಾಡಲಾಗುವುದು ಎಂದರು.
ಹಾವೇರಿ ಜಿಲ್ಲೆಯ ಶಿಗಾಂವಿಯಲ್ಲಿ ಸಿಎಂ ಬೊಮ್ಮಾಯಿಯವರು ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಇನ್ನು ಶರೀಫರು ಹಾಗೂ ಗುರು ಗೋವಿಂದಭಟ್ಟರ ಕುರಿತು ವಸ್ತು ಸಂಗ್ರಹಾಲಯವನ್ನು ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಸದುಪಯೋಗ ಮಾಡುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.