ಬೆಳಗಾವಿಯಲ್ಲಿ ಶಿವ ಜಯಂತಿಉತ್ಸವದ ಸಂಭ್ರಮ ಮನೆ ಮಾಡಿತ್ತು.ನಿನ್ನೆರಾತ್ರಿ ನಡೆದಆರಂಭ್ಡೋಲ್ತಾಶಾ ಪಥಕದ ಪ್ರಸ್ತುತಿ ಸಂಪೂರ್ಣ ಬೆಳಗಾವಿಯ ಗಮನವನ್ನತನ್ನೆಡೆ ಸೆಳೆದಿದ್ದು.

ಹೌದು, ಬೆಳಗಾವಿ ನಗರದಲ್ಲಿಛತ್ರಪತಿ ಶಿವಾಜಿ ಮಹಾರಾಜರಜಯಂತಿಯನ್ನಅತ್ಯಂತ ವಿಜೃಂಭಣೆಯಿಂದಆಚರಿಸಲಾಗುತ್ತಿದೆ. ಅಕ್ಷಯತೃತೀಯ ವೇಳೆ ರೂಪಕವಾಹನಗಳ ಮೆರವಣಿಗೆ ನಡೆಯುತ್ತದೆ.ಅದೇರೀತಿ ಫೆಬ್ರವರಿ 19 ನಡೆಯುವಜಯಂತ್ಯೋತ್ಸವವುಕೂಡ ಸಡಗರ – ಸಂಭ್ರಮದಿಂದಕೂಡಿರುತ್ತದೆ.ಎಸ್ಪಿಎಂರಸ್ತೆಯಲ್ಲಿರುವಛತ್ರಪತಿ ಶಿವಾಜಿ ಉದ್ಯಾನದಲ್ಲಿ ಬೆಳಿಗ್ಗೆಯಿಂದ ಶಿವರಾಯರ ಮೂರ್ತಿಗೆ ಮಾಲಾರ್ಪಣೆ ಮಾಡಿಗೌರವ ಸಲ್ಲಿಸಲಾಯಿತು.
ಸಂಜೆಯ ವೇಳೆ ಛತ್ರಪತಿ ಶಿವಾಜಿ ಉದ್ಯಾನದ ಹಿಂಭಾಗದಲ್ಲಿಆರಂಭಡೋಲ್ತಾಶಾ ಪಥಕದ ಪ್ರಸ್ತುತಿ ಸಂಪೂರ್ಣ ಬೆಳಗಾವಿಯ ಗಮನ ತನ್ನತ್ತ ಸೆಳೆಯುತ್ತಿತ್ತು.ಆಕರ್ಷಕ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ, ಶಿವಕಾಲೀನ ಇತಿಹಾಸವನ್ನತಿಳಿಸುವ, ಧೈರ್ಯ-ಶೌರ್ಯಗಳ ಆಟಗಳು, ಡೋಲ್ತಾಶಾ ಪಥಕದ ಪ್ರಸ್ತುತಿಎಲ್ಲರನ್ನ ಹುಬ್ಬೇರಿಸುವಂತೆ ಮಾಡುತ್ತಿತ್ತು. ಇದರಒಂದುಝಲಕ್ ಇಗೋ ನಿಮ್ಮ ಮುಂದೆ. 
ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಶಿವಪ್ರೇಮಿಗಳು ಭಾಗಿಯಾಗಿ ಈ ಕ್ಷಣದ ಮನೋರಂಜನೆಯನ್ನಕಣ್ತುಂಬಿಕೊಂಡರು. ಈ ವೇಳೆ ಜೈ ಭವಾನಿ- ಜೈಶಿವಾಜೀಯ ಜಯಘೋಷ ಪ್ರತಿಧ್ವನಿಸುತ್ತಿತ್ತು.
