State

ಶಿಗ್ಗಾಂವಿ ತಾಲೂಕಿನಲ್ಲಿ ವಿಐಎನ್‍ಪಿ ಸಕ್ಕರೆ ಕಾರ್ಖಾನೆಯಲ್ಲಿ ಡಿಸ್ಟಲರಿ ಘಟಕಕ್ಕೆ ಪೂಜೆ ನೆರವೇರಿಸಿದ ಸಿ.ಎಂ.ಬೊಮ್ಮಾಯಿ

Share

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿ, ಡಿಸ್ಟಲರಿ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಜಕ್ಕನಕಟ್ಟಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ವಿ.ಐ.ಎನ್.ಪಿ ಸಕ್ಕರೆ ಕಾರ್ಖಾನೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಎಂ ಬೊಮ್ಮಾಯಿ ಡಿಸ್ಟಲರಿ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ದ್ದೇಶಿಸಿ ಮಾತನಾಡಿದ ಸಿ.ಎಂ.ಬೊಮ್ಮಾಯಿ, ಸಚಿವ ಶಿವರಾಮ್ ಹೆಬ್ಬಾರ್ ನೇತೃತ್ವದಲ್ಲಿ ನಮ್ಮ ಕ್ಷೇತ್ರದಲ್ಲಿ, ಶುಗರ್ ಫ್ಯಾಕ್ಟರಿ ಡಿಸ್ಟಲರಿ ಘಟಕದ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ.

ಇನ್ನು 6ತಿಂಗಳಲ್ಲಿ ಕಾರ್ಯ ಪ್ರರಾಂಭವಾಗುತ್ತದೆ. ಇಂದು ಈ ಕಾರ್ಖಾನೆಯ ಡಿಸ್ಟಲರಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಕೃಷಿ ಹಾಗೂ ಔದ್ಯೋಗಿಕವಾಗಿ ಇದು ಬಹಳ ಸಹಾಯಕವಾಗಲಿದೆ. ಈ ಬಾಗದಲ್ಲಿ ಕಬ್ಬು ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿರುವುದರಿಂದ ಇದು ರೈತರಿಗೆ ಅನುಕೂಲವಾಗಲಿದೆ. ಇನ್ನು ಹಸಿರು ಇಂಧನೆ ಎಂದೇ ಹೇಳಲಾಗುವ ಎಥನಾಲ್ ಉತ್ಪಾದನೆ ಮಡುವುದರಿಂದ ಪೆಟ್ರೋಲ್ ಹಾಗೂ ಡಸೈಲ್ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಬಹುದಾಗಿದೆ. ಹಗಾಗಿ ಎಥನಾಲ್ ಪಲಸಿಯಂತೆ ನಮ್ಮ ಕ್ಷೇತ್ರದಲ್ಲಿ ಈ ಕಾರ್ಯ ವಾಗುತ್ತಿರುವುದಕ್ಕೆ ಶುಭ ಹಾರೈಸುತ್ತೇನೆ ಎಂದರು.
ಈ ವೇಳೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಶಾಸಕ ನೆಹರೂ ಓಲೇಕಾರ್ ಮತ್ತು ಇತರರು ಉಪಸ್ಥಿತರಿದ್ದರು.

 

Tags:

error: Content is protected !!