Belagavi

ಶಾಹುನಗರ ಮಧುರಾ ಮಂಡಳದ ನೂತನ ಪದಾಧಿಕಾರಿಗಳ ಪದಗ್ರಹಣ

Share

ಬೆಳಗಾವಿ ಶಾಹುನಗರ ಮಧುರಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಅಧಿಕಾರ ಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು.
ಶಾಹುನಗರದ ಗಣೇಶ ಮಂದಿರದಲ್ಲಿ ನಡೆದ ಮಂಡಳದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಘೋಷಿಸಲಾಯಿತು.

ಶಾಹುನಗರ ಮಧುರಾ ಮಹಿಳಾ ಮಂಡಳದ ಅಧ್ಯಕ್ಷರಾಗಿ ಶೈಲಾ ಹನುಮಂತ ಮೂರ್ತೆನ್ನವರ, ಉಪಾಧ್ಯಕ್ಷರಾಗಿ ಭಾರತಿ ಸೊಗಲದ, ಕಾರ್ಯದರ್ಶಿಯಾಗಿ ಸುಷ್ಮಾ ಜಗಜಂಪಿ, ಜಂಟಿ ಕಾರ್ಯದರ್ಶಿಯಾಗಿ ಮನೀಷಾ ಕಂಕಣಮೇಲಿ, ಖಜಾಂಚಿಯಾಗಿ ರತ್ನಾ ಕುಂಬಾರ, ಸ್ಮಿತಾ ಸೂರ್ಯವಂಶಿ ಅಧಿಕಾರ ವಹಿಸಿಕೊಂಡರು.

ಮಧುರಾ ಮಹಿಳಾ ಮಂಡಳದಿಂದ ಈ ವರ್ಷದ ಕಾರ್ಯಚಟುವಟಿಕೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಮಧುರಾ ಮಹಿಳಾ ಮಂಡಳದ ನೀತೂ ಹಾಗರಗಿ, ಪಾಲಾಕ್ಷಿ ಚಿಕ್ಕಮಠ, ಗಿರಿಜಾ ಪಾಟೀಲ, ಕವಿತಾ ಶಾನಭಾಗ, ಸ್ಮಿತಾ ಜಾಂಬಳೆ, ಮಹಾದೇವಿ ಯಾದವಾಡ ಮತ್ತಿತರರು ಪಾಲ್ಗೊಂಡಿದ್ದರು.

Tags:

error: Content is protected !!