ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ಎಂದು ಈಗಾಗಲೇ ಶಿಕ್ಷಣ ಸಚಿವರು ಹೇಳಿದ್ದಾರೆ. ಧರ್ಮಾಚರಣೆಗೆ, ಚರ್ಚ ಮಸೀದಿ, ಮಂದಿರಗಳಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅರಗ ಜ್ಞಾನೇಂದ್ರ ಅವರು ವಿದ್ಯಾರ್ಥಿಗಳು ಕಲಿತು ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂಬ ಸಂಸ್ಕಾರ ಕಲಿಯಲು ಒಳ್ಳೆಯದಾಗುತ್ತದೆ. ಧರ್ಮ ಆಚರಣೆಗೆ ಪೂಜೆ ಪುನಸ್ಕಾರಕ್ಕೆ ಚರ್ಚ ಮಸೀದಿ ದೇವಸ್ಥಾನಗಳಿವೆ ಅಲ್ಲಿ ಏನು ಮಾಡಲೂ ನಾವು ಸ್ವತಂತ್ರರು ಎಂದರು.
