ವೃತ್ತ ಪತ್ರಿಕೆ ವಿತರಣೆಆರಂಭವಾಗಿ 183 ವರ್ಷ ಕಳೆದರು ಸರ್ಕಾರದಿಂದಯಾವುದೇರೀತಿಯ ಸೌಲಭ್ಯ ಸಿಗಲಿಲ್ಲ ಎಂದು ವೃತ್ತ ಪತ್ರಿಕೆಗಳ ಮಾರಟಗಾರರ ಸಂಘದ ಸದಸ್ಯ ನಾಮದೇವ ಕಳ್ಳೆಗುದ್ದಿ ಹೇಳಿದರು.

ಬೆಳಗಾವಿಯ ವೃತ್ತ ಪತ್ರಿಕೆ ವಿತರಕರಅಭಿವೃದ್ದಿ ವತಿಯಿಂದ ಪತ್ರಿಕಾ ವಿತರಕರಿಗೆ ಸರ್ಕಾರದಿಂದಯಾವುದೇರೀತಿಯ ಸೌಲಭ್ಯ ಸಿಗಲಿಲ್ಲ. ನಮ್ಮನ್ನುಅಸಂಘಟಿತಕಾರ್ಮಿಕರ ವಲಯಕ್ಕೆ ಸೇರಿಸಬೇಕುಎಂದು ಈ ಸಂಘದ ಸದಸ್ಯರು ಮನವಿ ಮಾಡಿಕೊಂಡರು.
ನಂತರನಾಮದೇವ ಕಳ್ಳೆಗುದ್ದಿ ಅವರು ಮಾತನಾಡಿ ಪತ್ರಿಕಾ ವಿತರಣೆಆರಂಭವಾಗಿ 183 ವರ್ಷ ಕಳೆದರು ವೃತ್ತ ಪತ್ರಿಕೆ ವಿತರರಿಗೆಯಾವುದೇರೀತಿಯ ಸೌಲಭ್ಯದೊರಕಿಲ್ಲ. ಕೊರೊನಾ ವೇಳೆಯಲ್ಲಿ ಈ ಸಂಘದ ಎಷ್ಟೋ ಸದಸ್ಯರುತೀರಿ ಹೋದರೂಕೂಡ ಸರ್ಕಾರದಿಂದಯಾವುದೇರೀತಿಯ ಸೌಲಭ್ಯ ಸಿಗಲಿಲ್ಲ. ಅಸಂಘಟಿತಕಾರ್ಮಿಕರ ವಲಯಕ್ಕೆ ಸೇರಿಸಿದರೆ ನಮ್ಮ ಸಮಾಜಕ್ಕೆ ಸಿಗುವ ಸೌಲಭ್ಯಗಳು ಸಿಗಲಿದ್ದು ವೃತ್ತ ಪತ್ರಿಕಾ ವಿತರಕರಿಗೆಅತ್ಯಂತ ಅನುಕೂಲವಾಗಲಿದೆಎಂದರು.
ಒಟ್ಟಿನಲ್ಲಿಪತ್ರಿಕಾ ವಿತರಕರಿಗೆಈಗಲಾದರೂ ಸೌಲಭ್ಯಗಳು ಸಿಗುತ್ತೇವೋ ಎಂದುಕಾದು ನೋಡಬೇಕಿದೆ.