Belagavi

ವಿಶ್ವ ಜಯ ಟ್ರಸ್ಟ್ ಬೆಳಗಾವಿ ವತಿಯಿಂದ ವೃದ್ಧಾಶ್ರಮಕ್ಕೆ ದೇಣಿಗೆ

Share

ಶ್ರೀಮತಿ ಜಯಶೀಲಾ ಬ್ಯಾಕೋಡ್ ರವರು ತಮ್ಮ ಪತಿಯ ಹೆಸರಿನಲ್ಲಿ ನಡೆಸುತ್ತಿರುವ ‘ ವಿಶ್ವ ಜಯ ಟ್ರಸ್ಟ್ ಸಮಾಜ ಸೇವಾ ಸಂಸ್ಥೆ ಬೆಳಗಾವಿ’ ವತಿಯಿಂದ ದೇವರಾಜ ಅರಸು ಕಾಲೋನಿಯ ನಾಗನೂರು ಶಿವ ಬಸವೇಶ್ವರ ಟ್ರಸ್ಟ್ ನ ಶ್ರೀಮತಿ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮಕ್ಕೆ ದೈನಂದಿನ ಬಳಕೆ ವಸ್ತುಗಳನ್ನು ದೇಣಿಗೆಯಾಗಿ ನೀಡಿದರು.

ಬೆಳಗಾವಿಯ ಲೇಖಕಿಯರ ಸಂಘದ ಸದಸ್ಯೆ ಮತ್ತು ಸಾಹಿತಿ ಶ್ರೀಮತಿ ಜಯಶೀಲಾ ಬ್ಯಾಕೋಡ್ ರವರು ತಮ್ಮ ಪತಿಯ ಹೆಸರಿನಲ್ಲಿ ನಡೆಸುತ್ತಿರುವ ‘ ವಿಶ್ವ ಜಯ ಟ್ರಸ್ಟ್ ಸಮಾಜ ಸೇವಾ ಸಂಸ್ಥೆ ಬೆಳಗಾವಿ’ ವತಿಯಿಂದ ದೇವರಾಜ ಅರಸು ಕಾಲೋನಿಯ ನಾಗನೂರು ಶಿವ ಬಸವೇಶ್ವರ ಟ್ರಸ್ಟ್ ನ ಶ್ರೀಮತಿ ಚಿನ್ನಮ್ಮ ಹಿರೇಮಠ ವೃದ್ಧಾಶ್ರಮಕ್ಕೆ ನಿತ್ಯ ಬೇಕಾದ ದಿನಸಿ ಸಾಮಗ್ರಿಗಳು, ಮತ್ತು ಉಪಯೋಗಿಸಲು ಅನುಕೂಲವಾಗುವ ಬಟ್ಟೆಗಳು, ಹೊದಿಕೆಗಳು, ಔಷಧಿಗಳ ಕಿಟ್ ಹೊಂದಿರುವ ಸಾಮಗ್ರಿಗಳನ್ನು ವೃದ್ಧಾಶ್ರಮದ ಸಂಚಾಲಕರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಯಶೀಲಾ ಬ್ಯಾಕೋಡ್ ದೇವರು ಕೊಟ್ಟದ್ದನ್ನು ಅಸಹಾಯಕರಿಗೆ ಮತ್ತು ಅವಶ್ಯಕತೆ ಇದ್ದವರಿಗೆ ದಾನಮಾಡಿದರೆ ಆತ್ಮ ಸಂತೃಪ್ತಿ ಆಗುತ್ತದೆ. ಅಲ್ಲದೆ ಸಾಮಾಜಿಕವಾಗಿ, ಆರ್ಥಿಕವಾಗಿ ನಿಜವಾಗಿಯೂ ಅವಶ್ಯಕವಿದ್ದವರಿಗೆ ಸಹಾಯ ಮಾಡಿದಂತಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟನ ಸದಸ್ಯರಾದ ವೈಶಾಲಿ ಬ್ಯಾಕೋಡ, ಶಿಲ್ಪಾ ಬ್ಯಾಕೋಡ, ಶೈಲಜಾ ಬಿಂಗೆ, ಲಕ್ಷ್ಮಿ ಎಣ್ಣಿ,ಎಂ.ಎಸ್. ಚೌಗಲಾ ಸೇರಿದಂತೆ ಆಶ್ರಮದ ಸದಸ್ಯರು ಹಾಜರಿದ್ದರು.ಒಳ್ಳೆಯ ಬೆಳವಣಿಗೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಸಾಮಾಜಿಕವಾಗಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟನ ಸದಸ್ಯರಾದ ವೈಶಾಲಿ ಬ್ಯಾಕೋಡ, ಶಿಲ್ಪಾ ಬ್ಯಾಕೋಡ, ಶೈಲಜಾ ಬಿಂಗೆ, ಲಕ್ಷ್ಮಿ ಎಣ್ಣಿ,ಎಂ.ಎಸ್. ಚೌಗಲಾ ಸೇರಿದಂತೆ ಆಶ್ರಮದ ಸದಸ್ಯರು ಹಾಜರಿದ್ದರು.

Tags:

error: Content is protected !!