Vijaypura

ವಿವಾದ ನಡುವೆ ವಿದ್ಯಾರ್ಥಿಗಳಿಗೆ ನೀತಿ ಪಾಠ ಮಾಡಿದ ಎಸ್ಪಿ ಹಾಗೂ ಡಿಸಿ

Share

ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಹಿನ್ನೆಲೆಯಲ್ಲಿ ವಿಜಯಪುರದ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಶಾಲೆಗಳಿಗೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹಾಗೂ ಎಸ್ಪಿ ಹೆಚ್.ಡಿ. ಆನಂದಕುಮಾರ ಇವರು ನಗರದ ದರ್ಬಾರ್ ಹೈಸ್ಕೂಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದರು.

ವಿವಾದದಿಂದ ದೂರವಿದ್ದು ಶಿಕ್ಷಣದ ಕಡೆಗೆ ಮಹತ್ವ ಕೊಡುವಂತೆ ಅಧಿಕಾರಿಗಳ ಸಲಹೆ ನೀಡಿದರು. ಶಾಲಾ ಮಕ್ಕಳಿಗೆ ಬದುಕಿನ ಪಾಠ ಮಾಡಿದ ಎಸ್ ಪಿ. ಹಾಗೂ ಡಿಸಿಯವ್ರು ಶಾಲೆಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳ ಜೊತೆ ಮಾತನಾಡಿದರು. ಎಸ್ ಪಿ ಆನಂದಕುಮಾರ್. ಡಿಸಿ ಸುನೀಲಕುಮಾರ್ ಅವರು ವಿದ್ಯಾರ್ಥಿಗಳಿಗೆ ಪಾಠ ಭೋದಿಸಿದರು. ಜೀವನದಲ್ಲಿ ಮುಂದೆ ಬರಲು ಶಿಕ್ಷಣ ಪಡೆಯಿತು. ಮುಂದೆ ಉತ್ತಮ ಭವಿಷ್ಯ ಇದೆ, ವಿವಾದಗಳಿಂದ ದೂರವಿದ್ದು ಶಿಕ್ಷಣ ಪಡೆಯಿರಿ. ಪರೀಕ್ಷೆ ಬಗ್ಗೆ ಗಮನ ಕೊಡಿ, ಹೊರಗಡೆ ನಡೆಯುವ ವಿಷಯಗಳ ಬಗ್ಗೆ ಗಮನ ಹರಿಸಬೇಡಿ, ಉತ್ತಮ ಶಿಕ್ಷಣ ಪಡೆದು ನಮ್ಮ ಹಾಗೇ ದೊಡ್ಡ ಅಧಿಕಾರಿಗಳಾಗಿ ಎಂದು ಪಾಠ ಮಾಡಿದರು.

Tags:

error: Content is protected !!