State

ವಿಧಾನ ಪರಿಷತ್ ನೂತನ ಸದಸ್ಯರ ತರಬೇತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾರ್ಮಿಕ ಭಾಷಣ

Share

ರಾಜ್ಯದಲ್ಲಿ ಜನತೆಯ ಮೇಲೆ ಎದ್ವಾ ತದ್ವಾ ತೆರಿಗೆ ಹಾಕಬಾರದು. ರಾಜ ಮಹಾರಾಜರ ಕಾಲದಲ್ಲಿಯೇ ಈ ತೆರಿಗೆಯನ್ನು ಹೇಗೆ ವಿಧಿಸಬೇಕೆಂದು ಹೇಳಿದ್ದಾರೆ. ತೆರಿಗೆ ಹಾಕುವ ವಿಧಾನ ಕುರಿತಂತೆ ಮಹಾಭಾರತದಲ್ಲಿಯೇ ಹೇಳಿದ್ದಾರೆ ಎಂದು ಭೀಷ್ಮಾಚಾರ್ಯರ ಮಾತುಗಳನ್ನು ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಭಾವುಕವಾಗಿ ಮಾತನಾಡಿದರು.

ಬೆಂಗಳೂರಿನಲ್ಲಿ ನೂತನವಾಗಿ ಆಯ್ಕೆಯಾದ ಪರಿಷತ್ ಸದಸ್ಯರಿಗೆ ತರಬೇತಿ ಕಾಯಾಗಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಈ ವೇಳೆ ತರಬೇತಿ ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರ ಕುರಿತಂತೆ ಮಾರ್ಮಿಕವಾಗಿ ಮಾತನಾಡಿದರು. ರಾಜ್ಯದಲ್ಲಿ ಜನರ ಮೇಲೆ ತೆರಿಗೆಯನ್ನು ಹೇಗೆ ವಿಧಿಸಬೇಕೆಂದು ರಾಜ ಮಹಾರಾಜರ ಕಾಲದಲ್ಲಿಯೇ ಹೇಳಿದ್ದಾರೆ. ರಾಜ್ಯದಲ್ಲಿ ಯದ್ವಾತದ್ವಾ ತೆರಿಗೆ ಹಾಕಬಾರದು. ತೆರಿಗೆ ಸಂಗ್ರಹಣೆ ಕುರಿತಂತೆ ಭೀಷ್ಮ ಧರ್ಮರಾಯನಿಗೆ ಹೇಳಿದ ಕಥೆಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ರಾಜ್ಯಭಾರ ಮಾಡುವವರು ತೋಟದ ಮಾಲಿಯಂತೆ ಗಿಡ ಮರಗಳನ್ನು ಬೆಳೆಸಿ ಹಣ್ಣನ್ನು ಮಾರುವಂತಾಗಿರಬೇಕು. ಆದರೆ ಮರಗಿಡಗಳನ್ನು ಕತ್ತರಿಸಿ ಸುಟ್ಟು ಇದ್ದಿಲು ಮಾರುವವನಂತೆ ಇರಬಾರು. ಆಕಳು ಹಾಲು ಕರೆಯುವವರು ಎಲ್ಲವನ್ನು ಕರೆಯುವುದಿಲ್ಲ. ಬದಲಾಗಿ ಕರುವಿಗೂ ಬಿಡುತ್ತಾರೆ. ಹಾಗೆಯೇ ತೆರಿಗೆ ಸಂಗ್ರಹ ಮಾಡುವವರೂ ಕೂಡ ಎಲ್ಲವನ್ನು ಸಂಗ್ರಹ ಮಾಡಬಾರದು ಎಂದು ಮಾರ್ಮಿಕವಾಗಿ ಮಾತನಾಡಿದರು.

ಇನ್ನು ಇದೇ ವೇಳೆ ಮುಂದುವರೆದು ಮಾತನಾಡಿದ ಅವರು, ತೆರಿಗೆ ವಿಧಿಸುವ ಕ್ರಮ ಜೇನುಹುಳು ಹೂವಿನೊಳಗಿಂದ ಮಕರಂದವನ್ನು ಹೀರುವಂತೆ ಇರಬೇಕು. ಮಕರಂದವನ್ನು ಹೀರುವಾಗ ಜೇನು ಹುಳು ಹೂವನ್ನು ಹಾಳುಮಾಡುವುದಿಲ್ಲ. ಮುಂದಾಗುವ ಕಾಯನ್ನು ಹಾಳು ಮಾಡುವುದಿಲ್ಲ. ಬೆಳಯನ್ನು ಹಳು ಮಾಡುವುದಿಲ್ಲ.

ಬದಲಾಗಿ ಕೇವಲ ಸೂಕ್ಷ್ಮವಾಗಿ ಮಕರಂದವನ್ನು ಮಾತ್ರ ಹೀರುತ್ತದೆ. ಹಾಗೆಯೇ ತೆರಿಗೆಯನ್ನು ವಸೂಲಿ ಮಾಡಬೇಕು. ಇನ್ನು ಉಳ್ಳವರ ಮೇಲೆ ತೆರಿಗೆ ಹಾಕಬೇಕೇ ವಿನಃ ಬಡವರ ಮೇಲೆ ತೆರಿಗೆಯನ್ನು ವಿಧಿಸಬಾರದು. ಇದು ಬಜೆಟ್‍ನ ಮೂಲ ತತ್ವದಲ್ಲಿ ಒಂದು ಎಂದು ಹೇಳಿದರು.
ಇನ್ನು ಬಜೆಟ್‍ನಲ್ಲಿ ತೆರಿಗೆ ವಸೂಲಿ ಕುರಿತಂತೆ ಸಿದ್ದರಾಮಯ್ಯ ಮಾತು ತುಂಬಾ ಮಾರ್ಮಿಕವಾಗಿತ್ತು. ಇನ್ನು ಅವರು ಉಲ್ಲೇಖಿಸಿದ ಉಧಾಹರಣೆಗಳು ಸಭೆಯಲ್ಲಿ ಎಲ್ಲರನ್ನು ರೋಮಾಂಚನಗೊಳಿಸಿತ್ತು.

Tags:

error: Content is protected !!