ಕಲಿಯುಗದಲ್ಲಿ ಕರ್ಣನ್ನವರು ಇದ್ದಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ . ವಧುವಿನ ಮನೆಯವರು ನೀಡಿದ ವರದಕ್ಷಿಣೆಯನ್ನ ವಾಪಸ್ಸು ನೀಡಿ ಮಧುಮಗ ಶೈಲೇಂದ್ರ ಸಿಂಗ್ ಮತ್ತು ಆತನ ತಂದೆ ವಿಜಯಸಿಂಗ ರಾಥೋಡ್ ಸಮಾಜಕ್ಕೆ ಒಂದು ಒಳ್ಳೆಯ ಪ್ರೇರಣಾತ್ಮಕ ಸಂದೇಶ ನೀಡಿದ್ದಾರೆ .
ರಾಜಸ್ಥಾನದ ಜಯಪುರದಲ್ಲಿ ಈ ಘಟನೆ ನಡೆದಿದೆ . ವಿವಾಹದ ಸಂಧರ್ಭದಲ್ಲಿ ವರದಕ್ಷಿಣೆಯೆಂದು ೧೧ ಲಕ್ಷ ರೂಪಾಯಿ ನೀಡಿದ್ದಾರೆ. ಇವರ ಈ ನಿರ್ಣಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಶೈಲೇಂದ್ರಸಿಂಗ್ ಅವರು ಜಯಪುರ ವಿದ್ಯುತ್ ಪ್ರಸರಣ ಲಿಮಿಟೆಡ್ ನಲ್ಲಿ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಾರೆ. ವಿಜಯಸಿಂಗ್ ಪ್ರಾಪರ್ಟಿ ಸೆಲ್ ಬಿಸಿನೆಸ್ ಮಾಡುತ್ತಾರೆ .
