hubbali

ಲಿಂಗರಾಜ ಅಂಗಡಿ ಅವರಿಂದ ಮನಬಂದಂತೆ ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಆಯ್ಕೆ : ಸೋಮು ರೆಡ್ಡಿ ಆರೋಪ

Share

ಧಾರವಾಡ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆಯನ್ನು ತಮ್ಮ ಮನಬಂದಂತೆ ಜಿಲ್ಲಾ ಅಧ್ಯಕ್ಷ ಲಿಂಗರಾಜ ಅಂಗಡಿಯವರು ಮಾಡಿದ್ದಾರೆ. ಇದು ನಿಜಕ್ಕೂ ಸಾಹಿತ್ಯ ಪರಿಷತ್ತಿಗೆ ಕ್ಷೋಭೆ ತರುವಂತದಲ್ಲ ಸೋಮು ರೆಡ್ಡಿ ಖಂಡಿಸಿದ್ದಾರೆ.

ನಗರದಲ್ಲಿಂದು ಮಾದ್ಯಮ ವರದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ನಗರ ಹಾಗೂ ಧಾರವಾಡ ತಾಲೂಕಿನ ಅಧ್ಯಕ್ಷರನ್ನಾಗಿ ಅನರ್ಹರ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಇದು ಯಾರೋ ಒಬ್ಬರ ಒತ್ತಾಯಕ್ಕೆ ಮನಿದು ಪಾರದರ್ಶಕವಿಲ್ಲದ ಆಯ್ಕೆಯಾಗಿದೆ ಎಂದು ಆರೋಪಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಕಣ್ಣು ತೆರೆಯುವ ಸಂಘಟನೆಯಾಗಬೇಕು. ಆದರೆ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿಯವರು ರಾಜಕೀಯ ವ್ಯಕ್ತಿಗಳಿಂದ ಪ್ರೇರಿತವಾಗಿ ಇಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಸಾಹಿತ್ಯ ಪರಿಷತ್ತು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಸಭೆ ಮತ್ತು ಸಮಾರಂಭದಲ್ಲಿ ಸನ್ಮಾನ ಮಾಡಿ ಗುರುತಿಸುವ ಕಾರ್ಯವನ್ನು ಸಹ ಮಾಡಿಲ್ಲ. ಆದರಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಸೇರಲು ಭಯಸುವರು ಹಿಂದೇಟು ಹಾಕುತ್ತಿದ್ದಾರೆ. ಆಯ್ಕೆ ಮಾಡಿದ ತಾಲೂಕು ಅಧ್ಯಕ್ಷರನ್ನು ತಕ್ಷಣ ಕೆಳಗಿಳಿಸಿ ಮತ್ತೊಂದು ಕಾರ್ಯಕಾರಣಿ ಸಭೆ ಮಾಡಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು

Tags:

error: Content is protected !!