State

ಲತಾ ದೀದೀ ಕೇವಲ ಗಾನಸರಸ್ವತಿಯಲ್ಲ – ಅಭಿನಯ ಶಾರದೆಯೂ ಕೂಡ…

Share

ಲತಾ ಮಂಗೇಶ್ಕರ್ ಎಂದರೇ ಸಾಕು ಗಾನಸರಸ್ವತಿ ಎಂದು ಎಲ್ಲರಿಗೂ ತಿಳಿದ ವಿಷಯ ಆದರೇ, ಲತಾ ದೀದೀ ಎಂದೇ ಖ್ಯಾತಿ ಪಡೆದ ಲತಾ ಮಂಗೇಶ್ಕರ್ ಅಭಿನಯದಲ್ಲೂ ಎತ್ತಿದ ಕೈ.

ಹೌದು, ಭಾರತ ರತ್ನ ಲತಾ ಮಂಗೇಶ್ಕರ್ ಅವರು ಅನೇಕ ಭಾಷೆಗಳಲ್ಲಿ ಅನೇಕ ಸುಮಧುರ ಗೀತೆಗಳನ್ನ ಹಾಡಿದ್ದಾರೆ. ಇದೇ ಮಂಗೇಶ್ಕರ್ ಕುಟುಂಬ ಒಂದಿಲ್ಲೊAದು ಕ್ಷೇತ್ರದಲ್ಲಿ ತನ್ನ ಛಾಪನ್ನ ಮೂಡಿಸಿದೆ. ಲತಾ ಮಂಗೇಶ್ಕರ್ ತಂದೆ ದಿನಾನಾಥ ಮಂಗೇಶ್ಕರ್ ಓರ್ವ ಒಳ್ಳೆಯ ನಾಟಕ ಕಲಾವಿದ. ಲತಾ, ಉಷಾ, ಆಶಾ ಮತ್ತು ಪುತ್ರ ಹೃದಯನಾಥ ಮಂಗೇಶ್ಕರ್ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ ಆದರೇ, ಲತಾ ಮಂಗೇಶ್ಕರ್ ಕೇವಲ ಹಾಡು ಹೇಳುವುದರಲ್ಲೇ ನಿಸ್ಸಿಮರಲ್ಲ. ಅಭಿನಯದಲ್ಲಿಯೂ ಎತ್ತಿದ ಕೈ.

೧೯೫೨ ರಲ್ಲಿ ಬಾಲಾಜೀ ಪೇಂಡಾರ್‌ಕರ ಅವರು ಲತಾ ದೀದೀಯನ್ನ ಮರಾಠಿ ಚಿತ್ರರಂಗಕ್ಕೆ ಕರೆ ತಂದಿದ್ದರು. “ಛತ್ರಪತಿ ಶಿವಾಜಿ ಮಹಾರಾಜ್” ಮರಾಠಿ ಚಲನಚಿತ್ರದಲ್ಲಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ವೇಳೆ ಒಂದು ಗೀತೆಯನ್ನ ಹಾಡಿ ಲತಾ ಮಂಗೇಶ್ಕರ ಆರತಿ ಬೆಳಗುವ ಸೀನ್‌ನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರ ಗಾನಮಾಧುರ್ಯಕ್ಕೆ ಮನ ಸೋಲದವರು ಯಾರಿಲ್ಲ. ಅಲ್ಲದೇ ಇವರ ಅಭಿನಯವೂ ಕೂಡ ಅಪ್ರತಿಮ.

Tags:

error: Content is protected !!