ಲತಾ ಮಂಗೇಶ್ಕರ್ ಗಾನ ಸರಸ್ವತಿ, ಇಡೀ ಸಂಗೀತ ಪ್ರಪಂಚದಲ್ಲಿನ ಕಿರೀಟವಾಗಿದ್ರು. ಅವರ ಒಂದೊಂದು ಹಾಡುಗಳು ಔಷಧೀಯ ಗುಣಗಳನ್ನ ಹೊಂದಿವೆ, ಅವರ ಹಾಡುಗಳೇ ಔಷಧಿ. ಅವರ ಹಾಡನ್ನ ಕೇಳಿದ್ರೆ ಎμÉ್ಟೂೀ ಖಾಯಿಲೆಗಳು ವಾಸಿ ಆಗುತ್ತವೆ, ಮನಸ್ಸು ಹಗುರವಾಗುತ್ತದೆ ಎಂದು ಸಂಗೀತ ನಿರ್ದೇಶಕ ಕೆ.ಕಲ್ಯಾಣ ಸ್ಮರಿಸಿಕೊಂಡರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಗೀತ ನಿರ್ದೇಶಕ ಕೆ.ಕಲ್ಯಾಣ ಗಾನ ಸರಸ್ವತಿ ಲತಾ ಮಂಗೇಶ್ಕರ್ ಅವರ ಬಗ್ಗೆ ಮಾತನಾಡಲು ನನಗೆ ಅರ್ಹತೆಯಿಲ್ಲ. ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದಿದ್ದೇವೆ. ಸಂಗೀತ ಕ್ಷೇತ್ರಕ್ಕೆ ಇದೊಂದು ದೊಡ್ಡ ನಷ್ಟ. ಸಂಗೀತ ಕ್ಷೇತ್ರದ ಹಿರಿಯರಾಗಿದ್ದ ಅವರು ಇನ್ನೂ ಇತಬೇಕಿತ್ತು. ಸಂಗೀತಕ್ಕೆ ಲತಾ ಮಂಗೇಶ್ಕರ್ ಒಂದು ಶಿಸ್ತನ್ನು ತಂದುಕೊಟ್ಟಿದ್ರು. ಲತಾ ಮಂಗೇಶ್ಕರ್ ಇದ್ದಾರೆ ಅನ್ನೋ ಭಾವನೆಯಲ್ಲಿ ನಾವು ಮುಂದೆ ಹೋಗಬೇಕಿದೆ ಎಂದರು.

ಇನ್ನು ಒಂದು ಬಾರಿ ಮಾತ್ರ ಅವರೊಂದಿಗೆ ಇರಲು ನನಗೆ ಅವಕಾಶ ಸಿಕ್ಕಿತ್ತು. ಕನ್ನಡದಲ್ಲಿ ಅವರಿಂದ ಒಂದು ಹಾಡನ್ನು ಹಾಡಿಸಲು ಪ್ರಯತ್ನ ನಡೆದಿತ್ತು, ಅದು ಕೈಗೂಡಲಿಲ್ಲ ಎಂದು ಬೇಸರ ಹೊರ ಹಾಕಿದ ಕೆ.ಕಲ್ಯಾಣ ಇಡೀ ಸಮಾಜಕ್ಕೆ ಸ್ವಾಸ್ಥ್ಯ ಕೊಡುವ ಅಧ್ಬುತ ಧ್ವನಿ ಅವರದ್ದಾಗಿತ್ತು. ಮನೆಗೊಬ್ಬರು ಹಿರಿಯರು, ಊರಿಗೊಬ್ಬರು ಮುಖಂಡರಂತೆ ಸಂಗೀತ ಕ್ಷೇತ್ರದಲ್ಲಿ ಅವರು ಇರಬೇಕಿತ್ತು. ಸಂಗೀತ ಕ್ಷೇತ್ರದ ಸರಸ್ವತಿಯನ್ನು ಕಳೆದುಕೊಂಡಿದ್ದು ತುಂಬಲಾರದ ನಷ್ಟ ಎಂದರು.
ಒಟ್ಟಿನಲ್ಲಿ ಸಂಗೀತ ಲೋಕದ ಕಿರೀಟವೇ ಇಂದು ಕಳಚಿದಂತಾಗಿದೆ ಎಂದು ಸಂಗೀತ ನಿರ್ದೇಶಕ ಕೆ.ಕಲ್ಯಾಣ ಲತಾ ಮಂಗೇಶ್ಕರ್ ಅವರ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿದರು.