Nippani

ಲತಾಜಿ, ಇಬ್ರಾಹಿಂ ಸುತಾರ್, ಈಶ್ವರ ಮಂಟೂರ್ ಅವರಿಗೆ ನಿಪ್ಪಾಣಿಯಲ್ಲಿ ಶ್ರದ್ಧಾಂಜಲಿ

Share

ಭಾರತ ದೇಶ ಕಂಡ ಶ್ರೇಷ್ಠ ಮಹಾನ್ ವ್ಯಕ್ತಿಗಳಾದ ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್, ಕನ್ನಡದ ಕಬೀರ್ ಇಬ್ರಾಹಿಂ ಸುತಾರ ಮತ್ತು ಬಸವ ಪರಂಪರೆಯ ಶ್ರೇಷ್ಠ ಪ್ರವಚನಕಾರ ಈಶ್ವರ ಮಂಟೂರ ಅವರಿಗೆ ನಿಪ್ಪಾಣಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿಪ್ಪಾಣಿಯ ಮಹಾದೇವ ಮಂದಿರದಲ್ಲಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ವಚನಸಾಹಿತ್ಯ ಪರಿಷತ್ ಮತ್ತು ಗಡಿನಾಡು ಕನ್ನಡ ಬಳಗ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಗಲಿದ ಈ ಮೂವರು ಮಹಾ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಒಂದು ನಿಮಿಷ ಮೌನ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.

ಶರಣ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಪೆÇ್ರ.ಮಿಥುನ ಅಂಕಲಿ ಮಾತನಾಡಿ ಮೂವರು ಮಹಾನ್ ನಾಯಕರ ಸಾರ್ಥಕ ಜೀವನವನ್ನು ಸ್ಮರಿಸಿ ತಾಲೂಕಿನ ಎಲ್ಲ ಶರಣ ಕನ್ನಡಮನಸ್ಸುಗಳ ಪರವಾಗಿ ನುಡಿನಮನ ಸಲ್ಲಿಸಿದರು. ನಂತರ ಕಸಾಪ ಅಧ್ಯಕ್ಷ ಈರಣ್ಣಾ ಶಿರಗಾಂವಿ ಮಾತನಾಡಿ ಅಗಲಿದ ಚೇತನಗಳಿಗೆ ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ಗಿರಮಲ್ಲನವರ, ಗಡಿನಾಡು ಕನ್ನಡ ಬಳಗದ ಅಧ್ಯಕ್ಷ ಮಹಾದೇವ ಬರಗಾಲೆ, ಕಸಾಪ ಕೋಶಾಧ್ಯಕ್ಷ ಶಿವಾನಂದ ಪುರಾಣಿಕಮಠ, ಕಸಾಪ ಸಂಘಟನಾ ಸದಸ್ಯ ಮಾರುತಿ ಕೊತ್ತಂಬರಿ, ಬಾಳು ದಿಂಡೂಲೆ, ರಾಜಶೇಖರ ಬನ್ನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

Tags:

error: Content is protected !!