ಬೆಳಗಾವಿಯ ರಾಣಿ ಚನ್ನಮ್ಮ ನಗರದಲ್ಲಿ ಸಮಯಕ್ಕೆ ಸರಿಯಾಗಿ ಬಸ್ ಬಾರದೇ ಮತ್ತು ನೀರಿನ ಸಮಸ್ಯೆಗಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿಭಟಣೆ ನಡೆಸಿದ್ದಾರೆ.
ಬೆಳಗಾವಿ ನಗರದಲ್ಲಿ ಸಿಟಿ ಬಸ್ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಕಾರಣ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಮತ್ತು ಕಳೆದ 8 ದಿನದಿಂದ ನಗರದಲ್ಲಿ ನೀರು ಬಾರದೆ ಸಾರ್ವಜನಿಕರು ಪರಾದಾಡುತ್ತಿದ್ದು, ತಮ್ಮ ಸಮಸ್ಯೆಗಳನ್ನು ಈ ಕೂಡಲೇ ಪರಿಹರಿಸುವಂತೆ ಸಾರ್ವಜನಿಕರು ಆರ್.ಸಿ.ನಗರ ಲಕ್ಷ್ಮೀ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.
ಪತ್ರಿನಿತ್ಯ ಶಾಲೆಗೆ ಹೋಗಲು ಬಸ್ ಸಮಯಕ್ಕೆ ಸರಿಯಾಗಿ ಬಾರದೇ ಇರುವ ಕಾರಣ ಬಸ್ ವ್ಯವಸ್ಥೆ ಮಾಡಿಕೊಡಬೇಕು ಹಾಗೂ ಕಳೆದ 8 ದಿನದಿಂದ ಬಸ್ ಇಲ್ಲದೇ ಇರುವ ಕಾರಣ ಕಂಟ್ರೋಲರ್ ಗೆ ಕೇಳಿದರೆ ನೀವು ನಡೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಬೇರೆಕಡೆಗೆ ಹತ್ತತ್ತು ಬಸ್ ಬಿಟ್ಟಿದ್ದಿರಿ ಇಲ್ಲಿ ಏಕೆ ಬಸ್ ವ್ಯವಸ್ಥೆಯಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆಗಳ ಬಗ್ಗೆ ವಾಲಮೆನ್ ಗಳಿಗೆ ಕೇಳಿದರೆ ನಮಗೇನು ಗೊತ್ತಿಲ್ಲ ನೀವು ಅಧಿಕಾರಿಗಳಿಗೆ ಕೇಳಿ ಎಂದು ಕುಡಿದು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ನೀವು ಏನಾದರೂ ಮಾಡಿಕೊಳ್ಳಿ. ನಾವು ಯಾವುದೇ ಏರಿಯಾಗಳಲ್ಲಿ ನೀರು ಬಿಟ್ಟಿಲ್ಲ ಇಲ್ಲಿಯು ಬಿಡುವುದಿಲ್ಲ ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ರಾಣಿ ಚೆನ್ನಮ್ಮ ನಗರದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಹಲವಾರೂ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರ ಕೂಡಲೇ ಪರಿಹಾರ ನೀಡಬೆಕಾಗಿದೆ.