ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯತ್ತಿರುವ ಹೋಮ ಹವಣದಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ರಾಯಣ್ಣನ ಪುಣ್ಯ ಭೂಮಿ ನಂದಗಡಕ್ಕೆ ಭೇಟಿ ನೀಡಿದರು.

ಈ ವೇಳೆ ವಿಜಯೇಂದ್ರರರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ವಿಜಯೇಂದ್ರ ರವರ ಹೆಗಲ ಮೇಲೆ ಕಂಬಳಿ ಹಾಕಿ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು. ಈ ವೇಳೆ ಕುರಿಯ ಮರಿಯನ್ನು ಕಾಣಿಕೆಯಾಗಿ ನೀಡಿದರು.
ಈ ವೆಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ವೈ ವಿಜಯೇಂದ್ರರವರು, ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹೋಮ ಹವನ ನಡೆಯಲಿದೆ. ಹಾಗಾಗಿ ಅಲ್ಲಿ ಭಾಗಿಯಾಗುವ ಉದ್ದೇಶದಿಂದ ಬೆಳಗಾವಿಗೆ ಬಂದಿದ್ದೇನೆ. ಈ ಮಧ್ಯೆ ರಾಯಣ್ಣನ ಪುಣ್ಯಭೂಮಿಗೆ ಭೇಟಿ ನೀಡಿದೆ. ಇಂದು ಸಾಯಂಕಾಲ ಹಿಂದಿರುಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಯಣ್ಣನ ಅಭಿಮಾನಿಗಳು, ಬಿ.ವೈ ವಿಜಯೇಂದ್ರ ಅಭಿಮಾನಿಗಳು ಹಾಗೂ ಗ್ರಾಮಸ್ಥರೂ ಕೂಡ ಉಪಸ್ಥಿತರಿದ್ದರು.
