State

ರಾಜ್ಯಪಾಲರ ಮತ್ತು ವಚನಾನಂದ ಮಹಾಸ್ವಾಮಿಗಳ ಭೇಟಿ

Share

ರಾಜ್ಯಪಾಲರಾದ ತಾವರಚಂದ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭೇಟಿಯಾಗಿ ಸೌಹಾರ್ದಯುತವಾಗಿ ಮಾತುಕತೆ ನಡೆಸಿದರು.

ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಮಾತನಾಡಿ ಪಂಚಮಸಾಲಿಗಳ ಮೀಸಲಾತಿ ಹೋರಾಟ, ರಾಜ್ಯದ ಪ್ರಸ್ತುತ ಬೆಳವಣಿಗೆಗಳು ಹಾಗೂ ಹರಕ್ಷೇತ್ರ ಹರಿಹರದಲ್ಲಿ ನಡೆಸಲಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಕೇಂದ್ರ ಸಾಮಾಜಿಕ ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿರುವ ಇವರು, ದೇಶದ ಮೀಸಲಾತಿ ವ್ಯವಸ್ಥೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.

ಇದೇ ವೇಳೆ ರಾಜ್ಯಪಾಲರು ಯೋಗಾಭ್ಯಾಸದ ಬಗ್ಗೆ ಹಲವಾರು ಮಾಹಿತಿಗಳನ್ನು ನಮ್ಮಿಂದ ಪಡೆದುಕೊಂಡರು. ರಾಜ್ಯದ ಉದ್ದಗಲಕ್ಕೂ ಸಂಚರಿಸುತ್ತಿರುವ ರಾಜ್ಯಪಾಲರನ್ನು ನಮ್ಮ ಹರಕ್ಷೇತ್ರ ಕ್ಕೆ ಭೇಟಿ ನೀಡುವಂತೆ ಮನವಿ ಸಲ್ಲಿಸಲಾಯಿತು. ಹರಿಹರ ದಲ್ಲಿ ನಡೆಯುತ್ತಿರುವ ತುಂಗಾ ಆರತಿ ಯೋಜನೆಯ ಬಗ್ಗೆ ರಾಜ್ಯಪಾಲರು ಮಾಹಿತಿಯನ್ನು ಪಡೆದುಕೊಂಡರು. ಆತ್ಮೀಯ ಸ್ವಾಗತ ನೀಡಿ ಹೃದಯಪೂರ್ವಕವಾಗಿ ಆಧರಿಸಿ ನಮ್ಮ ಮಾತುಗಳಿಗೆ ಕಿವಿಯಾದ ರಾಜ್ಯಪಾಲರಿಗೆ ಧನ್ಯವಾದಗಳು.

Tags:

error: Content is protected !!