ಹಿಜಾಬ್-ಕೇಸರಿ ಬಗ್ಗೆ ಈಗಾಗಲೇ ಹೈಕೋರ್ಟ ನಿರ್ದೇಶನ ಕೊಟ್ಟಾಗಿದೆ. ಈ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಹೈಕೋರ್ಟ್ ಆದೇಶ ಪಾಲಿಸಲು ಮುಕ್ತವಾಗಿ ಬಿಡಬೇಕು. ಆಗ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆಯ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ ಬೊಮ್ಮಾಯಿ ಇಂದಿನಿಂದ 10ನೇ ತರಗತಿವರೆಗೆ ಪುನಾರಂಭವಾಗಿದೆ. ಸಂಜೆ ಮತ್ತೊಂದು ಸುತ್ತಿನ ಸಭೆ ಸೇರಿ ಎಸ್‍ಒಪಿ ಬಗ್ಗೆ ಚರ್ಚೆ ನಡೆಸುತ್ತೇವೆ. ಇನ್ನು ಹೈಕೋರ್ಟ ಆದೇಶವನ್ನು ಪಾಲನೆ ಮಾಡುವಂತೆ ಆಯಾ ಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಪಾಲಕರಿಗೆ ತಿಳಿಸಿದ್ದೇವೆ. ಅದನ್ನು ಮಾಡುವುದಕ್ಕೆ ನಾವು ಮುಕ್ತವಾಗಿ ಬಿಡಬೇಕು. ಇದಿಷ್ಟು ಮಾಡಿದ್ರೆ ಇದು ಸೌಹಾರ್ದತೆಯಿಂದ ಬಗೆಹರಿಯುತ್ತದೆ. ಅಲ್ಲದೇ ಇದನ್ನು ನಾವು ತಡೆ ಹಿಡಿದ್ರೆ ಹೈಕೋರ್ಟ ಕೂಡ ಆದಷ್ಟು ಬೇಗನೇ ಒಂದು ತೀರ್ಪು ಕೊಡಲು ಸಾಧ್ಯವಾಗುತ್ತದೆ ಎಂದರು.
ಹಿಜಾಬ್ ವಿವಾದದ ಕುರಿತು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಜಮೀರ್ ಹೇಳಿಕೆ ಎಷ್ಟು ಸಮಂಜಸವೆಂದು ದೇಶ ಗಮನಿಸ್ತಿದೆ. ಶಾಸಕ ಜಮೀರ್ ಮನಸ್ಥಿತಿ ಏನು ಎನ್ನುವುದು ಗೊತ್ತಾಗುತ್ತೆ. ಜಮೀರ್ ಅಹ್ಮದ್ ಹೇಳಿಕೆಗೆ ಇಡೀ ದೇಶವೇ ಪ್ರತಿಕ್ರಿಯಿಸಿದೆ ಎಂದು ಸಿಎಂ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ರಾಜ್ಯಪಾಲರ ಭಾಷಣದಲ್ಲಿ ಎಲ್ಲವನ್ನೂ ಸೇರಿಸಲು ಆಗಲ್ಲ. ಉತ್ತರ ಕೊಡುವ ಸಂದರ್ಭದಲ್ಲಿ ಎಲ್ಲವನ್ನೂ ಹೇಳುತ್ತೇವೆ. ಬೇರೆ ಬೇರೆ ಇಲಾಖೆಗಳ ಎಲ್ಲಾ ಸಾಧನೆ ಸೇರಿಸಲು ಆಗಲ್ಲ. ರಾಜ್ಯಪಾಲರ ಭಾಷಣಕ್ಕೆ ಉತ್ತರಿಸುವಾಗ ಉತ್ತರ ನೀಡುತ್ತೇವೆ ಎಂದು ಸಮರ್ಥಿಸಿಕೊಂಡರು.